ಧಾರವಾಡ: ರಾಜ್ಯದ 30ನೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಬಸವರಾಜ ಬೊಮ್ಮಾಯಿ ಅವರು ಧಾರವಾಡ ಹೊರವಲಯದ ರಾಯಾಪುರದಲ್ಲಿರುವ ತನ್ನ ತಂದೆ ಎಸ್.ಆರ್. ಬೊಮ್ಮಾಯಿ ಮತ್ತು ತಾಯಿ ಗಂಗಮ್ಮ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಗುರುವಾರ ಬೆಳಗ್ಗೆ ಸಮಾಧಿಗೆ ಪೂಜೆ ಸಲ್ಲಿಸುತ್ತಾ ಬಸವರಾಜ ಬೊಮ್ಮಾಯಿ ಭಾವುಕರಾದರು. ಇಬ್ಬರ ಸಮಾಧಿಗೂ ಪ್ರದಕ್ಷಿಣೆ ಹಾಕಿ ತಂದೆ ಸಮಾಧಿಗೆ ಕೆಲಹೊತ್ತು ಹಣೆ ಹಚ್ಚಿ ಕುಳಿತರು. ನಾಡಿನ ಜನರ ಸೇವೆ ಮಾಡಲು ಶಕ್ತಿ ಕೊಡಿ ಎಂದು ಬೇಡಿಕೊಂಡರು.