ಮುಧೋಳ: ನಾವು ಸಂಪಾದಿಸಿದ ಸಂಪತ್ತು ಕೊನೆಯವರೆಗೂ ಉಳಿಯದಿರಬಹುದು, ಪಡೆದ ವಿದ್ಯೆ ಮಾತ್ರ ಜತೆಗಿರುತ್ತದೆ ಎಂದು ನಿವೃತ್ತ ಶಿಕ್ಷಕ ವಿ.ವಿ. ಅರಕೇರಿ ಹೇಳಿದರು.
ನಗರದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ 1972-78ರ ವರೆಗಿನ ಬ್ಯಾಚ್ ವಿದ್ಯಾರ್ಥಿಗಳು ಇತ್ತೀಚೆಗೆ ಹಮ್ಮಿಕೊಂಡಿದ್ದ ಗುರುವೆಂದನೆ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರ ವಿದ್ಯೆ ಕಲಿತು ಉನ್ನತ ಸ್ಥಾನಗಳಿಸಲು ಸಾಧ್ಯ ಎಂದರು.
ನಿವೃತ್ತ ಶಿಕ್ಷಕ ಎಚ್.ಎನ್. ಮುರನಾಳ ಮಾತನಾಡಿ, ವಿಶ್ವವೇ ಒಂದು ಗ್ರಾಮದಂತಾಗಿದೆ ಎಂದರು.
ಡಾ.ಜಯಕುಮಾರ ಕಂಕಣವಾಡಿ ಮತನಾಡಿ, ವಿದ್ಯೆ ಕಲಿಸಿದ ಗುರುಗಳಿಗೆ ಅಭಿನಂದನೆ ಸಲ್ಲಿಸುವುದು ಭಾರತೀಯ ಸಂಸ್ಕೃತಿಯ ಭಾಗ ಎಂದರು.
ವಿಜಯ ವಸ್ತ್ರದ, ಅಶೋಕ ಕರೆಹೊನ್ನ, ಉಮಾ ಘಾಟಗೆ, ಜ್ಯೋತಿ ಪ್ರಭು ತಮ್ಮ ಅನಿಸಿಕೆ ಹಂಚಿಕೊಂಡರು.
ರಾಜಶೇಖರ ಅಂಗಡಿ, ಅಶೋಕ ತಳವಾರ, ಗೋಪಾಲ ಇಂಗಳೆ, ಬಸೀರ ನದಾಫ್ ಅವರನ್ನು ಸತ್ಕರಿಸಲಾಯಿತು. ಮ್ಯಾಜಿಕ್ ಶೋ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಚಂದ್ರಶೇಖರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಜ ಕೋಳಿ ಅತಿಥಿ ಪರಿಚಯಿಸಿದರು. ಸುನಂದಾ ಮೆಳ್ಳಿಗೇರಿ ತಂಡದವರು ಪ್ರಾರ್ಥಿಸಿ, ವಿಜಯ ವಸ್ತ್ರದ ಸ್ವಾಗತಿಸಿ, ಮಾರುತಿ ಮೋಶಿ ಮತ್ತು ಕಣಬೂರ ನಿರೂಪಿಸಿ, ಡಾ. ಜಯಕುಮಾರ ಕಂಕಣವಾಡಿ ವಂದಿಸಿದರು.
ಸಂಜು ವಾಲಿ, ರಾಹುಲ್ ಶಹಾ, ಕಿರಣ ಹೊನವಾಡ, ಮನೋಹರ ಕಂಕಣವಾಡಿ, ಮಲ್ಲಿಕಾರ್ಜುನ ಹಿರೇಮಠ, ಸಂಗಮೇಶ ಅಂಗಡಿ, ರಾಜಶೇಖರ ಅಂಗಡಿ, ಸುನಂದಾ ಮೆಳ್ಳಿಗೇರಿ, ಜ್ಯೋತಿ ಪ್ರಭು, ಉಮಾ ಘಾಟಗೆ, ವಿಜಯಾ ಗುರವ, ಜಯಶ್ರೀ ಬಾಡಗಿ, ಅಶೋಕ ಕರೆಹೊನ್ನ, ಮನೋಜ ಕೋಳಿ, ಚಂದ್ರಶೇಖರ ಪಾಟೀಲ, ಮಲ್ಲು ಉದಾಸೀಮಠ, ಜಿ.ಹವಾಲ್ದಾರ್, ಟಿ.ಕೆ. ಹಂಚಾಟೆ ಇದ್ದರು.