ಜಿಲ್ಲೆ

ಬೆಂಗಳೂರಲ್ಲಿ ಇಂಜಿನಿಯರ್​ ಆತ್ಮಹತ್ಯೆ: ತುಂಬಾ ಇಷ್ಟಪಟ್ಟು ಮದ್ವೆಯಾದಾಕೆ ಬಾಳಲ್ಲಿ ದುರಂತ

ಬೆಂಗಳೂರು: ನೂರಾರು ಕನಸಿನ ಬುತ್ತಿಯೊಂದಿಗೆ ಪ್ರೀತಿಸುತ್ತಿದ್ದ ಯುವಕನನ್ನೇ ಮನೆಯವರ ಮನವೊಲಿಸಿ ಮದ್ವೆಯಾಗಿದ್ದ ಯುವತಿ ಬಾಳಲ್ಲಿ ದುರಂತ ಸಂಭವಿಸಿದೆ. ಮದ್ವೆಯಾದ 4 ತಿಂಗಳಿಗೇ ಆಕೆ ಬದುಕಿನ ಪಯಣ ಮುಗಿಸಿದ್ದಾಳೆ.

ಕಡೂರು ತಾಲೂಕು ಬೋಳನಹಳ್ಳಿಯ ರವಿಕುಮಾರ್ ಮತ್ತು ಹೇಮಾವತಿ ದಂಪತಿಯ ಎರಡನೇ ಪುತ್ರಿ ಅಂಜು ಬಿ.ಆರ್. (26) ಮೃತ ದುರ್ದೈವಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಿವಿಲ್​ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಹಾಸನದಲ್ಲಿ ಓದುವಾಗಲೇ ಅಂಜು ಮತ್ತು ಅರಕಲಗೂಡಿನ ಅಂಜುಮ್ ಪಣಿಯಾರ್ ನಡುವೆ ಪ್ರೀತಿಯಾಗಿತ್ತು. ನಂತರ ಪೋಷಕರನ್ನ ಒಪ್ಪಿಸಿ ಕಳೆದ ಫೆಬ್ರವರಿಯಲ್ಲಿ ಕಡೂರಿನ ಬಳ್ಳಕೆರೆಯಲ್ಲಿ ಪ್ರಿಯಕರನ ಜತೆ ಅಂಜು ಮದ್ವೆಯಾಗಿದ್ದಳು. ದಂಪತಿ ಬೆಂಗಳೂರಿನಲ್ಲಿ ವಾಸವಿದ್ದರು. ಆದರೆ ನಿನ್ನೆ(ಶನಿವಾರ) ಸಂಜೆ ಮನೆಯಲ್ಲೇ ಅಂಜು ನೇಣಿಗೆ ಕೊರಳೊಡ್ಡಿದ್ದಾಳೆ.

ಮಗಳ ಸಾವಿನ ಸುದ್ದಿ ಕೇಳಿ ಆಘಾತಗೊಂಡ ಪಾಲಕರು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿ ಸುಬ್ರಹ್ಮಣ್ಯನಗರ ಪೊಲೀಸ್​ ಠಾಣೆಗೆ ದೂರು ನೀಡದ್ದಾರೆ. ಗಂಡನ ಮನೆಯಲ್ಲಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಂಜು 15 ದಿನಗಳ ಹಿಂದೆ ನಮ್ಮ ಬಳಿ ಕಷ್ಟ ಹೇಳಿಕೊಂಡಿದ್ದಳು. ಆಕೆಯನ್ನು ಗಂಡನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.