ಧಾರವಾಡ: ನಾಡೋಜ ಚನ್ನವೀರ ಕಣವಿ ಅವರ ಆರೋಗ್ಯಸ್ಥಿತಿ ಕುರಿತು ಧಾರವಾಡದ ಎಸ್‌ಡಿಎಂ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.
ಚನ್ನವೀರ ಕಣವಿ ಅವರ ಶ್ವಾಸಕೋಶದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದ್ದು, ಶ್ವಾಸಕೋಶ ಉಸಿರಾಟದ ಶಕ್ತಿ ಕಳೆದುಕೊಂಡು ಆರೋಗ್ಯಸ್ಥಿತಿ ಚಿಂತಾಜನಕವಾಗಿದೆ.
ಚೆಂಬೆಳಕಿನ ಕವಿ ಎಂದೇ ಖ್ಯಾತಿ ಪಡೆದಿರುವ, ರಾಜ್ಯ ಕಂಡ ಅಪರೂಪದ ಕವಿಗಳಲ್ಲಿ ಒಬ್ಬರಾಗಿರುವ ಚನ್ನವೀರ ಕಣವಿ ಅವರು ಅಕ್ಯುಟ್ ರೆಸ್ಪಿರೆಟ್ರಿ ಸಿಂಡ್ರಮ್(ಎಆರ್‌ಡಿಎಸ್)ನಿಂದ ಬಳಲುತ್ತಿದ್ದು, ಎರಡು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಆಸ್ಪತ್ರೆಗೆ ದಾಖಲಾದ ವೇಳೆ ಕಣವಿ ಅವರಿಗೆ ಕರೊನಾ ಸೋಂಕು ದೃಢಪಟ್ಟಿತ್ತು.