ಜಿಲ್ಲೆ

ಅಮಿತ್ ಶಾ ಮನೆ ಬಳಿ ಪ್ರತಿಭಟನೆ ಮಾಡಲು ಹೋಗಿದ್ದೆ... ಎನ್ನುತ್ತಲೇ ಕರ್ನಾಟಕ ಪೊಲೀಸರ ವಿರುದ್ಧ ಕಿಡಿಕಾರಿದ ನವ್ಯಶ್ರೀ!

arunakunigal

ದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನೆ ಮುಂದೆ ಮೌನ ಪ್ರತಿಭಟನೆ ನಡೆಸಲು ಮುಂದಾದ ಚನ್ನಪಟ್ಟಣ ಮೂಲದ ಕಾಂಗ್ರೆಸ್​ ಮುಖಂಡೆ ನವ್ಯಶ್ರೀ ರಾವ್​ಗೆ ಅವಕಾಶ ಸಿಕ್ಕಿಲ್ಲ. ಈ ಕುರಿತು ಸುದ್ದಿಗಾರರೊಂದಿಗೆ ನವ್ಯಶ್ರೀ ಅಸಮಾಧಾನ ಹೊರಹಾಕಿದ್ದಾರೆ.

'ಶುಕ್ರವಾರ ಸಂಜೆ ದೆಹಲಿಗೆ ಬಂದ್ವಿ. ಶನಿವಾರ ಅಮಿತ್​ ಶಾ ಅವರ ಮನೆ ಮುಂದೆ ಪ್ರತಿಭಟನೆ ನಡೆಸಬೇಕು ಎಂದು ಹೋದ್ವಿ. ಅಮಿತ್​ ಶಾ ಅವರು ಮನೆಯಲ್ಲಿದ್ದರೂ ನಮಗೆ ಅವಕಾಶ ಸಿಗಲಿಲ್ಲ. ಆ.15 ರಂದು ಕೂಡ ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಲು ಹೋಗುವಾಗಲೂ ನಮ್ಮನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ನಮ್ಮ ಪ್ರತಿಭಟನೆಯನ್ನ ಹತ್ತಿಕ್ಕುವ ಕೆಲಸ ಕರ್ನಾಟಕದಲ್ಲಿ ಆಗಿತ್ತು.

ಅಮಿತ್​ ಶಾ ಅವರ ಮನೆ ಬಳಿ ಹೋದಾಗ ನಮ್ಮನ್ನು ಥಾಣಾ ಪೊಲೀಸ್​ ಠಾಣೆಗೆ ಕರೆದೊಯ್ದಿದರು. ಬೇಡ ಮೇಡಂ ಎಂದು ಅವರು ಮನವಿ ಮಾಡಿದ್ರು. ಆಗ ನಾನು ಎಫ್​ಐಆರ್ ಪ್ರತಿ ಕೊಟ್ಟು ನನಗೆ ಆಗಿರುವ ಅನ್ಯಾಯದ ಬಗ್ಗೆ ವಿವರಿಸಿದೆ. ರಾಜ್ಯದಲ್ಲಿ ಅದರಲ್ಲೂ ಬೆಳಗಾವಿ ಪೊಲೀಸ್​ ಇಲಾಖೆಯು ಪ್ರಕರಣದ ದಿಕ್ಕು ತಪ್ಪಿಸುತ್ತಿದೆ. ರಾಜಕುಮಾರ್ ಟಾಕಳೆ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಆರೋಪಿಯನ್ನ ಬಂಧಿಸಿಲ್ಲ. ಹಾಗಾಗಿ ಪೊಲೀಸ್​ ಇಲಾಖೆಯ ವೈಫಲ್ಯವನ್ನ ಖಂಡಿಸಿ ಹೈಯರ್​ ಮಟ್ಟದಲ್ಲಿ ನ್ಯಾಯ ಕೇಳಲು ದೆಹಲಿಗೆ ಆಗಮಿಸಿದ್ದೇನೆ ಎಂದು ವಿವರಿಸಿದರು.

ರಾಜಕುಮಾರ್​ ಟಾಕಳೆ ಒಬ್ಬ ಅತ್ಯಾಚಾರ ಕೇಸ್​ನ ಆರೋಪಿ. ನನ್ನ ಖಾಸಗಿ ವಿಡಿಯೋ ಹರಿಯಬಿಟ್ಟು ಮಾನಹಾನಿ ಮಾಡಿದ್ದಾನೆ. ಆದರೂ ಈತನನ್ನು ಬಂಧಿಸಿಲ್ಲ. ಇನ್ನು ನಟೋರಿಯಸ್​, ಟೆರರಿಸ್ಟ್​ಗಳನ್ನು ಹೇಗೆ ಬಂಧಿಸ್ತಾರೆ? ಎಂದು ಪೊಲೀಸ್​ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ ನವ್ಯಶ್ರೀ, ಆರೋಪಿಯ ಬಂಧನ ಆಗದೆ ಇರೋದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗ್ತಿದೆ ಎಂದರು.

ಅಮಿತ್​ ಶಾ ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕಿದೆ. ಆದರೆ ಇನ್ನೂ ದಿನಾಂಕ ನಿಗದಿ ಆಗಿಲ್ಲ. ನವ್ಯಶ್ರೀಗೆ ಆದತಂಹ ಅನ್ಯಾಯ ಇನ್ಯಾವ ಹೆಣ್ಣಿಗೂ ಆಗಬಾರದು. ಪ್ರತಿಯೊಬ್ಬರು ದೆಹಲಿಗೆ ಬಂದು ನ್ಯಾಯ ಪಡೆಯುವ ಸ್ಥಿತಿ ನಿರ್ಮಾಣ ಆಗಬಾರದು. ರಾಜ್ಯದಲ್ಲೇ ನ್ಯಾಯ ಸಿಗುವಂತಾಗಬೇಕು ಎಂದರು.