ಬಾಳೆಹೊನ್ನೂರು ಸಮೀಪದ ಮಾಗುಂಡಿ ಗ್ರಾಮದ ಮಹಲ್ಗೋಡುವಿನಲ್ಲಿ ಆಟದ ಮೈದಾನ ವಿಸ್ತರಣೆಗಾಗಿ ಅನುಮತಿ ಪಡೆಯದೆ ಮತ್ತಿ ಮರಗಳನ್ನು ಅಕ್ರಮವಾಗಿ ಕಡಿದಿರುವುದನ್ನು ಎಸಿಎ್ ಚೇತನ್ ಮಂಗಲ್ ಗಸ್ತಿ ಪರಿಶೀಲಿಸಿದರು.  
ಜಿಲ್ಲೆ

ಮರ ಕಡಿದ ನಾಲ್ವರ ವಿರುದ್ಧ ಪ್ರಕರಣ ದಾಖಲು

ಜಿ.ಹೆಚ್. ಧನ್ಯಕುಮಾರ್

ಬಾಳೆಹೊನ್ನೂರು: ಅರಣ್ಯ ಇಲಾಖೆ ವ್ಯಾಪ್ತಿಯ ಮಾಗುಂಡಿ ಗ್ರಾಮದ ಮಹಲ್ಗೋಡುವಿನಲ್ಲಿ ಆಟದ ಮೈದಾನದ ವಿಸ್ತರಣೆಗಾಗಿ ಯಾವುದೇ ಅನುಮತಿ ಪಡೆಯದೆ ಮೀಸಲು ಅರಣ್ಯದಲ್ಲಿನ ಮರಗಳನ್ನು ಕಡಿತಲೆ ಮಾಡಿದ ಆರೋಪದ ಮೇಲೆ ನಾಲ್ವರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
ಮಾಗುಂಡಿ ಗ್ರಾಮದ ಸರ್ವೆ ನಂ.21 ಹಾಗೂ ಕಬ್ಬಿನಮಣ್ಣು ವಿಭಾಗದ ಹಲಸೂರು ಸರ್ವೆ ನಂ.55ರ ಮೀಸಲು ಅರಣ್ಯ ಪ್ರದೇಶದ ಮಹಲ್ಗೋಡು ಎಂಬಲ್ಲಿ ಆಟದ ಮೈದಾನದ ವಿಸ್ತರಣೆಗಾಗಿ ಅರಣ್ಯ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದೆ ಒಟ್ಟು 9 ಮತ್ತಿ ಮರಗಳನ್ನು ಕಡಿತಲೆ ಮಾಡಲಾಗಿತ್ತು.
ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಎಸಿಎ್ ಚೇತನ್ ಮಂಗಲ್ ಗಸ್ತಿ, ಆರ್‌ಎ್ಒ ಸಂದೀಪ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿದಾಗ ಮಾಗುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಲತ್ೀ, ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಅಭಿಷೇಕ್, ಗ್ರಾಪಂ ಸದಸ್ಯ ಸುಬ್ಬೇಗೌಡ, ಸೈಯ್ಯದ್ ಅಲವಿ ಎಂಬುವರು ಆಟದ ಮೈದಾನ ವಿಸ್ತರಣೆಗಾಗಿ ಮತ್ತಿ ಮರಗಳನ್ನು ಕಡಿದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ಸ್ಥಳದಲ್ಲಿದ್ದ 6.15 ಮೀಟರ್ ಟಿಂಬರ್ ಹಾಗೂ 1.5 ಮೀಟರ್ ಸೌಧೆಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಭಾಗಿಯಾದವರಿಗೆ ಜಾಮೀನಿನ ಮೇಲೆ ಬಿಡುಗಡೆಮಾಡಿದ್ದು ಸೂಕ್ತ ದಂಡ ಕಟ್ಟಿಸಿಕೊಳ್ಳಲಾಗುವುದು ಎಂದು ಆರ್‌ಎ್ಒ ಸಂದೀಪ್ ತಿಳಿಸಿದ್ದಾರೆ.