ಜಿಲ್ಲೆ

ಹಿಂಬದಿಯಿಂದ ಬೈಕ್​ಗೆ ಕಾರು ಡಿಕ್ಕಿ, ಕೆಳಗೆ ಬಿದ್ದವನ ಮೇಲೆ ಹಲ್ಲೆ ಮಾಡಿ ಅಪಹರಿಸಿದ ಆಗುಂತಕರು

ಮುಂಡಗೋಡ: ಪಟ್ಟಣದ ಮಾದರಿ ಶಾಲೆಯ ಎದುರು ಬೈಕ್​ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದು ಆತ ಕೆಳಗೆ ಬಿದ್ದ ನಂತರ ಅದೇ ಕಾರಿನಲ್ಲಿ ಆತನನ್ನು ಎತ್ತಾಕಿಕೊಂಡು ಪರಾರಿಯಾದ ಘಟನೆ ಗುರುವಾರ ರಾತ್ರಿ 7.30ಕ್ಕೆ ನಡೆದಿದೆ.

ಪಟ್ಟಣದ ಜಮೀರ ಅಹ್ಮದ್ ದರ್ಗಾವಾಲೆ ಅಪಹರಣಕ್ಳೊಗಾದ ವ್ಯಕ್ತಿ.

ಈತ ತಾಲೂಕು ಕ್ರೀಡಾಂಗಣದಿಂದ ಮಾದರಿ ಶಾಲೆಯ ಮುಂಭಾಗದ ಮಾರ್ಗವಾಗಿ ಮನೆಗೆ ತೆರಳುತ್ತಿರುವಾಗ ಯಾರೋ ಬಿಳಿ ಬಣ್ಣದ ಕಾರ್​ನಲ್ಲಿ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದ್ದಾರೆ. ನಂತರ ಆತನ ಮೇಲೆ ಹಲ್ಲೆ ಮಾಡಿ ಕಾರಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ.

ಘಟನೆಯಿಂದ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ವಣವಾಗಿದ್ದು, ಯಾರು ಅಪಹರಣ ಮಾಡಿದರು. ಯಾವ ಕಾರಣಕ್ಕೆ ಮಾಡಿದರು ಎಂಬುದು ತಿಳಿಯದಾಗಿದೆ. ವಿಷಯ ತಿಳಿದ ಪೊಲೀಸರು ಕಾರ್ಯ ಪ್ರವೃತ್ತರಾಗಿ ಪಟ್ಟಣದ ವಿವಿಧಡೆ ಸಿಸಿ ಕ್ಯಾಮರಾ ತಪಾಸಣೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.