ಜಿಲ್ಲೆ

ಡಿವೈಡರ್​ಗೆ ಕಾರು ಡಿಕ್ಕಿಯಾಗಿ ಕೂಸು ಸಾವು

ಅಣ್ಣಿಗೇರಿ: ತಾಲೂಕಿನ ನಲವಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 67ರ ಟೋಲ್​ಗೇಟ್ ಹತ್ತಿರ ಡಿವೈಡರ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂರು ತಿಂಗಳ ಕೂಸು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ಮಂಗಳವಾರ ಸಂಭವಿಸಿದೆ. ವರ್ಣಿಕ ವಿನೋದ ಸಜ್ಜನ ಮೃತಪಟ್ಟಿದ್ದು, ತಾಯಿ ಅನುಷಾ ವಿನೋದ ಸಜ್ಜನ (28) ಹಾಗೂ ಕಾರು ಚಾಲಕ ಗವಿಸಿದ್ದಪ್ಪ ಸಜ್ಜನವರ (44) ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಹುಬ್ಬಳ್ಳಿ ಕಡೆಯಿಂದ ಮುಂಡರಗಿಗೆ ತೆರಳುತ್ತಿತ್ತು ಎನ್ನಲಾಗಿದೆ. ಪ್ರಕರಣ ದಾಖಲಾಗಿದೆ.