ಜಿಲ್ಲೆ

ದಶಕದ ನಂತರ ಲಖಮಾಪೂರಕ್ಕೆ ಬಂತು ಬಸ್

ಸೋಮನಾಥ ರೆಡ್ಡಿ

ನರಗುಂದ: ಬಸ್‌ಗಳಿಲ್ಲದೇ ಶಕ್ತಿ ಯೋಜನೆಯಿಂದ ವಂಚಿತಗೊAಡಿದ್ದ ತಾಲೂಕಿನ ಪ್ರವಾಹಪೀಡಿತ ಲಖಮಾಪೂರ ಗ್ರಾಮಕ್ಕೆ ೧೯ ವರ್ಷಗಳ ಬಳಿಕ ಕೊನೆಗೂ ಬಸ್‌ನ ಸೌಭಾಗ್ಯ ದೊರೆತಿದೆ. ಶಾಸಕ ಸಿ.ಸಿ. ಪಾಟೀಲ ಅವರು ನೂತನ ಬಸ್‌ಗೆ ಬುಧವಾರ ಚಾಲನೆ ನೀಡಿದರು.

ಗ್ರಾಮದ ಹನುಮಂತದೇವರ ದೇವಸ್ಥಾನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಲಖಮಾಪೂರ ಗ್ರಾಮಕ್ಕೆ ತೆರಳಲು ಸಮರ್ಪಕ ರಸ್ತೆ, ಸುಸಜ್ಜಿತ ಸೇತುವೆ ವ್ಯವಸ್ಥೆ ಇರಲಿಲ್ಲ.

ಹೀಗಾಗಿ ಬಸ್ ಸೌಕರ್ಯವಿಲ್ಲದೇ ಮಹಿಳೆಯರು, ಮಕ್ಕಳು, ಶಾಲಾ, ಕಾಲೇಜ್ ವಿದ್ಯಾರ್ಥಿಗಳು ೨-೩ ಕಿ.ಮೀ. ನಡೆದು ವಿವಿಧೆಡೆಗೆ ಸಂಚರಿಸುವAತಾಗಿತ್ತು. ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಕೋಟ್ಯಾಂತರ ರೂ. ಅನುದಾನ ನೀಡಿz್ದೆÃನೆ. ಗುಣಮಟ್ಟದ ರಸ್ತೆ ನಿರ್ಮಿಸಲಾಗಿದೆ.

ಆದರೆ, ಸುಸಜ್ಜಿತ ಸೇತುವೆ ನಿರ್ಮಾಣಕ್ಕೆ ಕೆಲ ರೈತರು ತಕರಾರು ಮಾಡಿರುವುದು ಒಳ್ಳೆಯ ಬೆಳವಣಿಗೆಯಲ್ಲ.

ಅಭಿವೃದ್ಧಿಯ ಹಿತದೃಷ್ಟಿಯಿಂದ ಗ್ರಾಮದ ಪ್ರತಿಯೊಬ್ಬ ಗುರು-ಹಿರಿಯರು ಸೇರಿ ಪರಸ್ಪರ ಮಾತುಕತೆ ನಡೆಸುವ ಮೂಲಕ ಸೇತುವೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಇದರಿಂದ ನಿರಂತರ ಸಾರಿಗೆ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಅನುಕೂಲವಾಗುತ್ತದೆ ಎಂದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಉಚಿತ ಶಕ್ತಿ ಯೋಜನೆಯಿಂದ ನನ್ನ ಮತಕ್ಷೇತ್ರದ ಯಾವುದೇ ಗ್ರಾಮಗಳ ಮಹಿಳೆಯರು ವಂಚಿತರಾಗಬಾರದು ಎಂಬ ಸದುz್ದÉÃಶದಿಂದ ಬಸ್‌ಗೆ ಚಾಲನೆ ನೀಡಲಾಗಿದೆ ಎಂದರು.

ನರಗುAದದ ಘಟಕ ವ್ಯವಸ್ಥಾಪಕ ಪ್ರಶಾಂತ ಪಾನಬುಡೆ ಮಾತನಾಡಿ, ಕೇವಲ ೧೩೦ ಮನೆಗಳಿರುವ ಲಖಮಾಪೂರ ಗ್ರಾಮಕ್ಕೆ ಈ ಹಿಂದೆ ಎರಡು ಬಾರಿ ಬಸ್‌ಗಳನ್ನು ಬಿಡಲಾಗಿತ್ತು.

ದಿನಕಳೆದಂತೆ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿದ್ದರಿಂದ ಸೇವೆ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಆದರೀಗ ಶಾಸಕ, ಸಚಿವರ ಸೂಚನೆ ಮೇರೆಗೆ ನಿತ್ಯ ಬೆಳಗ್ಗೆ ೮ ಗಂಟೆಗೆ ಹಾಗೂ ಸಂಜೆ ೫ ಗಂಟೆಗೆ ನರಗುಂದದಿAದ ಲಖಮಾಪೂರಕ್ಕೆ ಎರಡು ಬಸ್‌ಗಳ ಸೇವೆ ಮತ್ತೆ ಪುನರಾರಂಭಿಸಲಾಗಿದೆ ಎಂದರು.

ಶAಕರಗೌಡ ನಡಮನಿ ಮಾತನಾಡಿದರು. ವೀರನಗೌಡ್ರ ಹಿರೇಗೌಡ್ರ, ಕೆಎಸ್‌ಆರ್‌ಟಿ ಲೆಕ್ಕ ಪತ್ರ ವಿಭಾಗದ ಮಾದನ್ನವರ, ನಾಗರಾಜ ತೋಟಗೇರ, ಶಿವಾನಂದ ತೆಗ್ಗಿನಮನಿ, ಎನ್.ಟಿ. ಕೆಂಪನಗೌಡ್ರ, ಎನ್.ಕೆ. ಸೋಮಾಪೂರ, ಶಂಕರಗೌಡ ಯಲ್ಲಪ್ಪಗೌಡ್ರ, ಪರ್ವತಗೌಡ ಶಂಕರಗೌಡ್ರ, ಸುರೇಶ ಹೂಗಾರ, ಮಲ್ಲಪ್ಪ ಮೇಟಿ, ಎಂ.ಎಸ್. ಪಾಟೀಲ, ಪರಪ್ಪ ಯಲಿಗಾರ, ವೆಂಕನಗೌಡ ನಡಮನಿ, ಫಕೀರಗೌಡ ನಡಮನಿ, ಶಿವನಗೌಡ ದೇವರಮನಿ, ಗುರುಪಾದಗೌಡ ದೇವರಮನಿ, ಶಿವನಗೌಡ ಹಳೇಮನಿ, ಶಾರವ್ವ ನಡಮನಿ, ಪಡಿಯಪ್ಪ ನಡಮನಿ, ರೂಪಾ ನಡಮನಿ, ಫಕೀರವ್ವ ನಡಮನಿ ಇದ್ದರು.