ಜಿಲ್ಲೆ

ರಸ್ತೆ ಮಧ್ಯೆ ಉರಿದ ಕಾರು

ದಾಂಡೇಲಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಕಾರೊಂದು ನಡು ರಸ್ತೆಯಲ್ಲೇ ಸುಟ್ಟ ಘಟನೆ ಬಡಾಕಾನಶಿರಡಾ ಗ್ರಾಮದ ಹತ್ತಿರ ಬುಧವಾರ ನಡೆದಿದೆ.

ನಗರದಿಂದ ಅಂಬಿಕಾನಗರಕ್ಕೆ ಹೋಗುವ ರಸ್ತೆಯಲ್ಲಿ ಘಟನೆ ನಡೆದಿದ್ದು, ಶಿಫ್ಟ್ ಡಿಸೈರ್ ಕಾರು ಸುಟ್ಟಿದೆ. ಕಾರಿನ ಚಾಲಕ ತಕ್ಷಣ ಇಳಿದು ಅಪಾಯದಿಂದ ಪಾರಾಗಿದ್ದಾನೆ. ವೆಸ್ಟ್‌ಕೋಸ್ಟ್ ಪೇಪರ್ ಮಿಲ್‌ನ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.