ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಅದರಲ್ಲಿಯೂ ವಿಶೇಷವಾಗಿ ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿಗೆ ಪೂರಕವಾಗುವಂತಹ ಯಾವುದೇ ಪ್ರಸ್ತಾವನೆ ಮಂಡಿಸಿಲ್ಲ ಎಂದು ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಬೇಸರ ವ್ಯಕ್ತಪಡಿಸಿದೆ.
ಸಂಸ್ಥೆಯ ಸಭಾಂಗಣದಲ್ಲಿ ಟಿವಿ ಮೂಲಕ ಬಜೆಟ್ ನೇರ ಪ್ರಸಾರವನ್ನು ವೀಸಿದ ಸಂಸ್ಥೆಯ ಪದಾಧಿಕಾರಿಗಳು, ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಂಸ್ಥೆಯ ಸಭಾಂಗಣದಲ್ಲಿ ಟಿವಿ ಮೂಲಕ ಬಜೆಟ್ ನೇರ ಪ್ರಸಾರವನ್ನು ವೀಸಿದ ಸಂಸ್ಥೆಯ ಪದಾಧಿಕಾರಿಗಳು, ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು
ಕಿತ್ತೂರ ಮಾರ್ಗವಾಗಿ ಧಾರವಾಡ -ಬೆಳಗಾವಿ ರೈಲು ಮಾರ್ಗ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾತ್ರ ಈ ಬಜೆಟ್ನಲ್ಲಿ ನಮೂದಿಸಲಾಗಿದೆ. ಎ್ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ ಇರುವ ತೊಂದರೆಗಳನ್ನು ನಿವಾರಿಸಲು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಜವಳಿ ಪಾರ್ಕ್ಗಳನ್ನು ಸ್ಥಾಪಿಸಲು ಮತ್ತು ಎಂಎಸ್ ಎಂ ಇ ಸೆಕ್ಟರ್ ಬಲವರ್ಧನೆಗೊಳಿಸಲು ಕ್ರಮಕೆಗೊಳ್ಳಬೇಕೆಂದು ಕಳೆದ ತಿಂಗಳು ಮನವಿ ಸಲ್ಲಿಸಿದ್ದರೂ ಈ ಬಜೆಟ್ ನಲ್ಲಿ ಯಾವುದೇ ಪ್ರಸ್ತಾವನೆಗಳನ್ನು ಸೂಚಿಸದೇ ಇರುವುದು ಈ ಭಾಗದ ಉದ್ದಿಮೆಗಳ ಅಭಿವದ್ಧಿಗೆ ಹಿನ್ನಡೆಯಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಬಿಆರ್ಟಿಎಸ್ ಸಾರಿಗೆ ವ್ಯವಸ್ಥೆಯನ್ನು ರದ್ದುಗೊಳಿಸಿ ಆ ಸ್ಥಳದಲ್ಲಿ ಮೋನೊ ಹಾಗೂ ಮೆಟ್ರೋ ರೆಲು ಸಂಚಾರ ಪ್ರಾರರಂಭಿಸಬೇಕೆಂದು ಸಹ ಮನವಿಯಲ್ಲಿ ಕೋರಲಾಗಿತ್ತು. ಆದರೂ ಈ ಬಜೆಟ್ ನಲ್ಲಿ ಯಾವುದೇ ಪ್ರಸ್ತಾವನೆಗಳು ಇಲ್ಲದೇ ಇರುವುದು ಆಶ್ಚರ್ಯಕರ ಹಾಗೂ ಖೇದಕರ ಅಂಶವಾಗಿದೆ. ಬಿಆರ್ಟಿಎಸ್ನಿಂದ ಆಗುತ್ತಿರುವ ಅನಾನುಕೂಲತೆಗಳ ಬಗ್ಗೆ ಗಮನ ಸೆಳೆದರೂ ಈ ಸರ್ಕಾರವು ಸುಧಾರಣೆ ಕ್ರಮಗಳನ್ನು ಕೆಗೊಳ್ಳಲು ಆಸಕ್ತಿ ತೋರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯ ಎಸ್.ಪಿ.ಸಂಶಿಮಠ, ಉಪಾಧ್ಯ ಸಂದೀಪ ಬಿಡಸಾರಿಯಾ, ಗೌರವ ಕಾರ್ಯದಶಿರ್ ರವೀಂದ್ರ ಬಳಿಗಾರ, ಜೊತೆ ಗೌರವ ಕಾರ್ಯದಶಿರ್ ಹಾಗೂ ಪತ್ರಿಕಾ ಮಾಧ್ಯಮ ಸಮಿತಿ ಚೇರ್ಮನ್ ಮಹೇಂದ್ರ ಸಿಂಘಿ, ಮಾಜಿ ಅಧ್ಯರಾದ ಶಂಕರಣ್ಣ ಮುನವಳ್ಳಿ, ವಸಂತ ಲದವಾ, ರಮೇಶ ಪಾಟೀಲ, ತೆರಿಗೆ ಸಮಿತಿ ಕೋ ಚೇರ್ಮನ್ ಸಿಎ ಚನ್ನವಿರ ಮುಂಗರವಾಡಿ, ಲೆಕ್ಕಪರಿಶೋಧಕ ವೈ.ಎಂ. ಖಟಾವಕರ, ಸದಸ್ಯರಾದ ವೀರಣ್ಣ ಕಲ್ಲೂರ, ಪಿ.ಡಿ. ಬನಸಾಲಿ, ಶಾಂತರಾಜ ಪೋಳ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.