ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಿಂದ ೩೦ ಲಕ್ಷ ರೂ. ಅನುದಾನದ ನೂತನ ಬೌದ್ಧ ವಿಹಾರ ನಿರ್ಮಾಣ ಕಾಮಗಾರಿಗೆ ಮಂಗಳವಾರ ಗಣ್ಯರು ಭೂಮಿಪೂಜೆ ನೆರವೇರಿಸಿದರು.
ಡಾ.ರಾಜು ಕಾಂಬಳೆ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ಇಂದಿನ ದಿನ ಅವರ ಅನುಯಾಯಿಗಳಿಗೆ ಮಹತ್ವದ ದಿನವಾಗಿದ್ದು, ಬೌದ್ಧ ಧರ್ಮದ ಪ್ರಚಾರ ಮತ್ತು ಉಪಾಸನೆಗಾಗಿ ಬೌದ್ಧ ವಿಹಾರಗಳ ಅವಶ್ಯ ಇರುತ್ತದೆ. ಶಿರಗುಪ್ಪಿಯಲ್ಲಿ ಅದ್ಭುತ ಬೌದ್ಧ ವಿಹಾರ ನಿರ್ಮಾಣದ ಕನಸು ನನಸಾಗುತ್ತಿದೆ ಎಂದರು.
ಧಮ್ಮಪಾಲ ಭಂತೇಜಿ, ಡಾ.ಎಸ್.ಪಿ.ತಳವಾರ, ಬಾಳಾಸಾಹೇಬ ಕಾಂಬಳೆ, ತುಕಾರಾಮ ಕಾಂಬಳೆ, ಗ್ರಾಪಂ ಅಧ್ಯಕ್ಷೆ ಶೋಭಾ ಗದಾಳೆ, ಮುಖಂಡರಾದ ಶಿವಾನಂದ ಪಾಟೀಲ, ಮಹಾವೀರ ಕಾತ್ರಾಳೆ, ಕಿರಣ ದಾಮನ್ನವರ, ರಾಜುಗೌಡ ಪಾಟೀಲ, ರಾಜೇಂದ್ರ ಚೌಗುಲೆ, ಶಿವಾನಂದ ನವಿನಾಳೆ, ಅಜಿತ ಪೂಜಾರಿ, ಸದಾಶಿವ ಪೂಜಾರಿ, ಇಕ್ಬಾಲ್ ಕನವಾಡೆ, ಮಸ್ತಾನ್ ಕನವಾಡೆ, ಸಂದೀಪ ಕೋಳಿ, ಕಮಲಾ ಜಂಗಟಾಳೆ, ಬೌದ್ಧ ಫೌಂಡೇಷನ್ ಅಧ್ಯಕ್ಷ ವಿದ್ಯಾಧರ ಮೌರ್ಯ, ಉಪಾಧ್ಯಕ್ಷೆ ಗೀತಾ ಕಾಂಬಳೆ, ರಮೇಶ ಕಾಂಬಳೆ, ಸಚಿನ ಕಾಂಬಳೆ, ಪ್ರೇಮಾ ಕಾಂಬಳೆ, ಶ್ರೀದೇವಿ ನಾಯಿಕ, ಶಿಲ್ಪಾ ಶಿರಗಾಂವೆ, ಪ್ರಕಾಶ ಕಾಂಬಳೆ ಇತರರಿದ್ದರು.