ಅವಘಡದ ಬಳಿಕ ವಿದ್ಯುತ್ ತಂತಿ ಸರಿಪಡಿಸುತ್ತಿರುವ ಸಿಬ್ಬಂದಿ. 
ಜಿಲ್ಲೆ

ಕೆಇಬಿ ಸಿಬ್ಬಂದಿಯ ಬೇಜವಾಬ್ದಾರಿಗೆ ಅಮಾಯಕ ಬಾಲಕ ಬಲಿ

Webdesk - Ravikanth

ಚಿತ್ರದುರ್ಗ: ಕೆಇಬಿ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಅಮಾಯಕ ಬಾಲಕನೊಬ್ಬ ಬಲಿಯಾಗಿದ್ದಾನೆ. ಒಂಬತ್ತು ವರ್ಷದ ಬಾಲಕನೊಬ್ಬ ವಿದ್ಯುತ್ ಶಾಕ್​ಗೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇಂಥದ್ದೊಂದು ಅವಘಡ ಸಂಭವಿಸಿದೆ.

ಚಿತ್ರದುರ್ಗದ ಸಾದಿಕ್​ ಬಡಾವಣೆ ವಾಸಿ ಮಣಿಕಂಠ (9) ಸಾವಿಗೀಡಾದ ಬಾಲಕ. ವಿದ್ಯುತ್​ ಕಂಬದಿಂದ ನೇತಾಡುತ್ತಿದ್ದ ತಂತಿಯೊಂದರ ಸ್ಪರ್ಶದಿಂದಾಗಿ ಈ ಅವಘಡ ಉಂಟಾಗಿದೆ. ಇದನ್ನು ಅಅವೈಜ್ಞಾನಿಕವಾಗಿ ಅಳವಡಿಸಲಾಗಿತ್ತು.

ಬೀದಿ ದೀಪ ಆನ್-ಆಫ್ ಮಾಡುವ ಸಲುವಾಗಿ ಈ ವಿದ್ಯುತ್ ತಂತಿಯನ್ನು ಕೆಇಬಿ ಸಿಬ್ಬಂದಿ ಇಳಿಬಿಟ್ಟಿದ್ದರು. ಬಾಲಕನ ಸಾವಿಗೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಬಾಲಕನ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಿಕರು ಮತ್ತು ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸೂಕ್ತಕ್ರಮಕ್ಕೆ ಆಗ್ರಹಿಸಿದರು.