ಜಿಲ್ಲೆ

'ಸುಳ್ಳು ಹೇಳಬಾರದು’ ಕತೆಯನ್ನು ದಯವಿಟ್ಟು ಪಠ್ಯದಿಂದ ಕಿತ್ತುಹಾಕಿ: ಬೊಳುವಾರು ಮಹಮದ್ ಕುಂಞಿ

ಬೆಂಗಳೂರು: ಪಠ್ಯಪುಸ್ತಕ ರಚನಾ ವ್ಯವಸ್ಥೆ ಕುರಿತು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಒಂದಿಲ್ಲೊಂದು ರೀತಿಯಲ್ಲಿ ವಾದ-ವಿವಾದಗಳು ಪ್ರಾರಂಭವಾಗಿವೆ. ಈ ಹೊತ್ತಲ್ಲೇ ನಾನು ರಚಿಸಿದ ಕತೆಯನ್ನು ಪಠ್ಯಪುಸ್ತಕದಿಂದ ತೆಗೆಯಿರಿ ಎಂದು ಕನ್ನಡ ಖ್ಯಾತ ಕಥೆಗಾರ ಬೊಳುವಾರು ಮಹಮದ್ ಕುಂಞಿ ಅವರು ಶಿಕ್ಷಣ ಸಚಿವ ಬಿ.ಸಿ. ನಾಗೇಶ್​ಗೆ ಪತ್ರ ಬರೆದಿದ್ದಾರೆ.

'ಶಿಕ್ಷಣ ಸಚಿವರಿಗೆ ನನ್ನ ಪ್ರಣಾಮಗಳು. ಪ್ರಸಕ್ತ ಸಿರಿ ಕನ್ನಡ–ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕ (ಪರಿಷ್ಕೃತ) 5ನೇ ತರಗತಿ ಪುಸ್ತಕದ 24ನೇ ಪುಟದಲ್ಲಿರುವ ‘ಸುಳ್ಳು ಹೇಳಬಾರದು’ ಎಂಬ ಹೆಸರಿನ ನನ್ನ ಪುಟ್ಟ ಕತೆಯೊಂದರ ಆಶಯಗಳು, ಪ್ರಸಕ್ತ ವರ್ಷದಲ್ಲಿ ಪರಿಷ್ಕೃತಗೊಂಡಿರುವ/ಗೊಳ್ಳಲಿರುವ ಇತರ ಕೆಲವು ಪಠ್ಯಗಳ ಆಶಯಗಳೊಂದಿಗೆ ಸರಿಯಾಗಿ ಹೊಂದಿಕೆ ಆಗದಿರುವ ಸಾಧ್ಯತೆ ಇದೆ. ಹಾಗಾಗಿ ನಮ್ಮ ಪುಟ್ಟ ಮಕ್ಕಳು ಗೊಂದಲಕ್ಕೊಳಗಾಗುವ ಸಾಧ್ಯತೆಯುಂಟು. ಆದ್ದರಿಂದ, ದಯವಿಟ್ಟು ‘ಸುಳ್ಳು ಹೇಳಬಾರದು’ ಎಂಬ ಈ ನನ್ನ ಕತೆಯನ್ನು ಕಿತ್ತು ಹಾಕಿ, ಪರಿಷ್ಕೃತ ಪಠ್ಯ ಕ್ರಮದ ಆಶಯಗಳಿಗೆ ಹೊಂದಿಕೊಳ್ಳುವ ಬೇರೊಂದು ಪಠ್ಯವನ್ನು ಸೇರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಿದ್ದೇನೆ' ಎಂದು ಬೊಳುವಾರು ಮಹಮದ್ ಕುಂಞಿ ಮನವಿ ಮಾಡಿದ್ದಾರೆ.