ಜಿಲ್ಲೆ

ದಡ ಸೇರದ ದೋಣಿ

ವೀರೇಶ ಸೌದ್ರಿ

ಭಟ್ಕಳ: ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್ ಕೆಟ್ಟು ಹೋದ ಪರಿಣಾಮ ದಡಕ್ಕೆ ಬರಲಾಗದೆ ತೆಂಗಿನಗುಂಡಿ ಸಿ ವಾಕ್ ಸಮೀಪ ಸಿಲುಕಿರುವ ಘಟನೆ ನಡೆದಿದೆ.

ಮಲ್ಪೆ ಮೂಲದ ಕುಲಮಹಾಸ್ತ್ರೀ ಹಾನಿಗೆ ಒಳಗಾಗಿರುವ ಬೋಟ್. ಮಲ್ಪೆಯ ಸಾಯಿ ಚರಣ ಹೆಸರಿನ ಬೋಟು ನೆರವಿಗೆ ಬಂದಿತ್ತು. ತೆಂಗಿನಗುಂಡಿ ಬಂದರು ಸಮೀಪಿಸುತ್ತಿದ್ದಂತೆಯೇ ಕಟ್ಟಿದ್ದ ಹಗ್ಗ ತುಂಡಾಗಿದ್ದು, ಬೃಹದಾಕಾರದ ಅಲೆಗಳಿಂದಾಗಿ ಬೋಟು ಕಲ್ಲಿಗೆ ಬಡಿದಿದೆ. ಭಾರಿ ಅಲೆಗಳ ಕಾರಣದಿಂದ ಬೋಟ್ ಫ್ಯಾನ್​ಗೆ ಮೀನಿನ ಬಲೆ ಸಿಲುಕಿತ್ತು. ಬಲೆ ಸಿಲುಕಿಕೊಂಡ ಕಾರಣ ಮುಂದೆ ಸಾಗಲಾಗದೇ ಮುಳುಗುವ ಸ್ಥಿತಿಯಲ್ಲಿದ್ದ ಬೋಟನ್ನು ಕೂಡಲೇ ಮೀನುಗಾರರನ್ನು ರಕ್ಷಿಸಿ ಭಟ್ಕಳ ಮೂಲದ ಬೋಟ್​ಗೆ ಹಗ್ಗ ಕಟ್ಟಿ ಎಳೆದು ತರಲಾಗುತ್ತಿತ್ತು. ಆದರೆ ಆ ವೇಳೆ ಕಟ್ಟಿದ ಹಗ್ಗವೂ ತುಂಡಾಗಿದ್ದು, ಬೋಟ್ ದಡಕ್ಕೆ ತರಲು ಸಾಧ್ಯವಾಗಿಲ್ಲ. ಅರಬ್ಬಿ ಸಮುದ್ರದಲ್ಲಿ ಭಾರಿ ಪ್ರಮಾಣದಲ್ಲಿ ಅಲೆ ಉಂಟಾಗಿರುವುದೇ ಇದಕ್ಕೆ ಕಾರಣವಾಗಿದೆ.