ಸರಣಿ ತರಬೇತಿ, ವಿಚಾರಗೋಷ್ಠಿ ಕಾರ್ಯಕ್ರಮ  
ಜಿಲ್ಲೆ

ಮೌಲ್ಯಯುತ ಶಿಕ್ಷಣದಿಂದ ಉತ್ತಮ ಭವಿಷ್ಯ

Karthika K.S

ವಿಜಯವಾಣಿ ಸುದ್ದಿಜಾಲ ಶಂಕರನಾರಾಯಣ

ಆಧುನಿಕ ತಂತಜ್ಞಾನದ ಯುಗದಲ್ಲಿ ಬದಲಾವಣೆ ಸಾಮಾನ್ಯ. ಕೌಶಲ, ಜ್ಞಾನಗಳ ಜತೆಗೆ ತಂತ್ರಜ್ಞಾನದ ಬಳಕೆಯಲ್ಲಿ ವಿದ್ಯಾರ್ಥಿಗಳು ಪ್ರಗತಿ ಕಾಣಬೇಕು. ಕೌಶಲಗಳ ಅಭಿವೃದ್ಧಿಗೆ ತರಬೇತಿ, ಪರಿಶ್ರಮದ ಅಗತ್ಯವಿದೆ ಎಂದು ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಹೇಳಿದರು.

ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಹಾಗೂ ಲಿಯೋ ಕ್ಲಬ್ ವತಿಯಿಂದ ಸರಣಿ ತರಬೆೇತಿ, ವಿಚಾರಗೋಷ್ಠಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಕೇವಲ ಅಂಕಗಳ ಗಳಿಕೆಗೆ ಸಿಮೀತವಾಗಿರದೆ ಶ್ರೇಷ್ಠ ಸಂಸ್ಕಾರಗಳ ಮೌಲ್ಯಯುತ ಶಿಕ್ಷಣ ಅಳವಡಿಸಿಕೊಂಡಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಜೀವನದಲ್ಲಿ ಯಶಸ್ಸು ಕಾಣಲು ಸೂಕ್ತ ಮಾರ್ಗದರ್ಶನದ ಅಗತ್ಯವಿದೆ ಎಂದರು.

ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ವೆಂಕಟರಾಮ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ಸರಣಿ ತರಬೇತಿ, ವಿಚಾರಗೋಷ್ಠಿಗಳ ಕಾರ್ಯಕ್ರಮಗಳಿಂದ ಹೆಚ್ಚಿನ ಪ್ರಯೋಜನವಾಗಲಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಸ್ಥಾಪಾಕಾಧ್ಯಕ್ಷ, ತರಬೇತಿ ಕಾರ್ಯಕ್ರಮದ ಸಂಚಾಲಕ ಬಿ.ರಾಜೇಂದ್ರ ಕಿಣಿ ಬೆಳ್ವೆ, ವಾಜಿ ಅಧ್ಯಕ್ಷ ವಸಂತಕುವಾರ್ ಶೆಟ್ಟಿ ಬೆಳ್ವೆ, ವೈ.ಪಟ್ಟಾಭಿರಾಮ್ ಭಟ್ ಮರೂರು, ಕಾರ್ಯದರ್ಶಿ ಕೆ.ಸಂಜೀವ ಆರ್ಡಿ, ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ವಸಂತ್ ಜಿ., ಬೆಳ್ವೆ ಲಯನ್ಸ್ ಕ್ಲಬ್ ಸ್ಥಾಪಾಕಾಧ್ಯಕ್ಷ ಬಿ.ರಾಜೇಂದ್ರ ಕಿಣಿ, ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ವಸಂತ್ ಜಿ. ಸ್ವಾಗತಿಸಿದರು. ಅಕ್ಷತಾ ಪ್ರಾರ್ಥಿಸಿದರು. ಬಿ.ರಾಜೇಂದ್ರ ಕಿಣಿ ಬೆಳ್ವೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ಸ್ನಾತಕೋತ್ತರ ಸಂಚಾಲಕಿ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಮಹಾಲಿಂಗಪ್ಪ ವಂದಿಸಿದರು.

ಶೈಕ್ಷಣಿಕ ಜೀವನ ಅಮೂಲ್ಯವಾದುದು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿ, ಜೀವನದಲ್ಲಿ ಯಶಸ್ಸು ಹೊಂದಲು ಸೂಕ್ತ ತರಬೇತಿ, ಮಾರ್ಗದರ್ಶನದ ಅವಶ್ಯಕತೆಯಿದೆ. ಶಿಕ್ಷಣಕ್ಕೆ ಒತ್ತು ನೀಡುವುದರೊಂದಿಗೆ ಉತ್ತಮ ಲಿತಾಂಶ ಗಳಿಸಿ ಜೀವನದಲ್ಲಿ ಯಶಸ್ಸು ಕಾಣಬೇಕು. ಬಿ.ರಾಜೇಂದ್ರ ಕಿಣಿ ಬೆಳ್ವೆ ಲಯನ್ಸ್ ಕ್ಲಬ್ ಸ್ಥಾಪಾಕಾಧ್ಯಕ್ಷ https://www.vijayavani.net/atonement-program-at-sri-anantapadmanabha-temple-perdur https://www.vijayavani.net/tribute-to-tamil-artists