ಜಿಲ್ಲೆ

ಬೆಳಗಾವಿ ಉಪ ಸಮರ: ಕ್ಷಣಕ್ಷಣಕ್ಕೂ ತಿರುವು, ಸತೀಶ್​ ಜಾರಕಿಹೊಳಿಗೆ ಮುನ್ನಡೆ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಕ್ಷಣಕ್ಷಣಕ್ಕೂ ಭಾರಿ ಕುತೂಹಲ ಮೂಡಿಸಿದೆ. ಆರಂಭಿಕವಾಗಿ ಕಾಂಗ್ರೆಸ್​ ಮುನ್ನಡೆ ಸಾಧಿಸಿತ್ತಾದಾರೂ 21ನೇ ಸುತ್ತಿಗೆ ಬರುವಷ್ಟರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. 48ನೇ ಸುತ್ತಿಗೆ ಬರುತ್ತಿದ್ದಂತೆ ಕಾಂಗ್ರೆಸ್​ ಅಭ್ಯರ್ಥಿ ಸತೀಶ್​ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದಾರೆ.

48ನೇ ಸುತ್ತಿನಲ್ಲಿ ಸತೀಶ್​ ಜಾರಕಿಹೊಳಿ 2,43,361 ಮತ ಪಡೆಯುವ ಮೂಲಕ 8,540 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ 2,36,047 ಪಡೆದಿದ್ದರು.

49ನೇ ಸುತ್ತು

ಸತೀಶ್​ ಜಾರಕಿಹೊಳಿ- 2,46,468 ಮತಗಳು

ಮಂಗಲಾ ಅಂಗಡಿ- 2,36,872 ಮತಗಳು

ಎಂಇಎಸ್- 81,703

ಕಾಂಗ್ರೆಸ್​ಗೆ 9596 ಮತಗಳ ಮುನ್ನಡೆ

50ನೇ ಸುತ್ತು

ಸತೀಶ್​ ಜಾರಕಿಹೊಳಿ- 2,52,104 ಮತಗಳು

ಮಂಗಲಾ ಅಂಗಡಿ- 2,42,079 ಮತಗಳು

ಕಾಂಗ್ರೆಸ್​ಗೆ 10,025 ಮತಗಳ ಮುನ್ನಡೆ