ಕೋಲಾರದ ರವಿ ಹೋಂ ಅಪ್ಲೆಯನ್ಸ್​ನ ನೂತನ ಮಳಿಗೆಯನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಉದ್ಘಾಟಿಸಿದರು. ಸಂಸದ ಎಂ.ಮಲ್ಲೇಶ್​ಬಾಬು, ಮಾಜಿ ಸಂಸದ ಎಸ್​.ಮುನಿಸ್ವಾಮಿ, ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಇದ್ದರು. 
ಜಿಲ್ಲೆ

ದಿವಾಳಿಯಾದ ರಾಜ್ಯ ಸರ್ಕಾರ

ಕೋಲಾರ ಡೆಸ್ಕ್

ಕೇಂದ್ರ ಬೃಹತ್​ ಕೈಗಾರಿಕೆ, ಉಕ್ಕು ಸಚಿವ ಎಚ್​.ಡಿ.ಕುಮಾರಸ್ವಾಮಿ ಆರೋಪ

ಕೋಲಾರ: ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದೆ ಎಂದು ಹೇಳುವುದಿಲ್ಲ, ಬದಲಿಗೆ ಆರ್ಥಿಕ ಅದಕ್ಷತೆ, ಅಸಮರ್ಪಕ ನಿರ್ವಹಣೆಯಿಂದ ಖಜಾನೆ ಖಾಲಿಯಾಗಿ ರಾಜ್ಯ ಸಾಲದ ಸುಳಿಗೆ ಸಿಲುಕಿದೆ ಎಂದು ಕೇಂದ್ರ ಬೃಹತ್​ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್​.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ರವಿ ಹೊಮ್​ ಅಪ್ಲಯನ್ಸಸ್​ ಮಳಿಗೆ ಉದ್ಘಾಟಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ. ಅಲ್ಲದೆ ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ತೆರಿಗೆ, ಶುಲ್ಕ ಹೆಚ್ಚಿಸುತ್ತಾ ಬಂದಿದೆ. ಗ್ಯಾರಂಟಿಗಳಿಗೆ ವರ್ಷಕ್ಕೆ 52 ಸಾವಿರದಿಂದ 60 ಸಾವಿರ ಕೋಟಿ ರೂ. ಆಗುತ್ತದೆ ಎಂದು ಸರ್ಕಾರವೇ ಹೇಳುತ್ತಿದೆ. ಆದರೆ ಸಂಗ್ರಹ ಆಗುತ್ತಿರುವ ಜನರ ತೆರಿಗೆ ದುಡ್ಡು ಎಲ್ಲಿ ಹೋಗುತ್ತಿದೆ? ಇದಕ್ಕೆ ಉತ್ತರ ಕೊಡಬೇಕಲ್ಲವೇ? ಎಂದು ಪ್ರಶ್ನಿಸಿದರು. ಪ್ರತಿಯೊಂದಕ್ಕೂ ಗ್ಯಾರಂಟಿ ನೆಪ ಮಾಡಿಕೊಂಡು ಅಭಿವೃದ್ಧಿ ಬಗ್ಗೆ ರ್ನಿಲಕ್ಷ$್ಯ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಸರ್ಕಾರದ ಬಳಿ ಹಣ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಅವರೇ ಹೇಳಿದ್ದಾರೆ. ಹಾಗಾದರೆ, ಜನರಿಂದ ತೆರಿಗೆ ರೂಪದಲ್ಲಿ ವಸೂಲಿ ಮಾಡುತ್ತಿರುವ ಹಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದರು. ಶಾಸಕರಾದ ಸಮೃದ್ಧಿ ವಿ.ಮಂಜುನಾಥ್​, ವಿಧಾನ ಪರಿಷತ್​ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಶಾಸಕ ಕೃಷ್ಣಾರೆಡ್ಡಿ, ವಿಧಾನ ಪರಿಷತ್​ ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಮುಖಂಡರಾದ ಸಿ.ಎಂ.ಆರ್​.ಶ್ರೀನಾಥ್​, ವಕ್ಕಲೇರಿ ರಾಮು, ರವಿ ಹೊಮ್​ ಅಪ್ಲಯನ್ಸಸ್​ ಮಳಿಗೆಯ ರವಿ

ಮತ್ತು ನಾಗರಾಜ್​ ಇತರರಿದ್ದರು.

ಮಾಜಿ ಸಚಿವರ ಭೂಮಿ ತೆರವು ಏಕಿಲ್ಲ

ಶ್ರೀನಿವಾಸಪುರದಲ್ಲಿ ಮಾಜಿ ಸಚಿವರು ಅರಣ್ಯ ಭೂಮಿ ಒತ್ತುವರಿ ಮಾಡಿರುವುದನ್ನು ಏಕೆ ತೆರವು ಮಾಡಿಸುತ್ತಿಲ್ಲ, ನ.6ರಂದೇ ಸರ್ವೇ ಮಾಡಲು ದಿನ ನಿಗದಿ ಆಗಿತ್ತು. ಏಕೆ ಸರ್ವೇ ಆಗಿಲ್ಲ?, ಇದಕ್ಕೆ ಸರ್ಕಾರ, ಅರಣ್ಯ ಸಚಿವರು ಉತ್ತರ ಕೊಡಬೇಕು. ಸಚಿವ ಕೃಷ್ಣ ಬೈರೇಗೌಡ ಏನು ಮಾಡುತ್ತಿದ್ದಾರೆ?, ದೇಶಕ್ಕೆ ಬುದ್ಧಿ ಹೇಳುವ ಅವರು ಮಾಜಿ ಸ್ಪೀಕರ್​ಗೆ ಬುದ್ಧಿ ಹೇಳಲು ಆಗುತ್ತಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಕುದುರೆಮುಖ ಗಣಿ ಯೋಜನೆ ಹಾಗೂ ಎಚ್​ಎಂಟಿ ಕಾರ್ಖಾನೆ ಬಗ್ಗೆ ಇನ್ನಿಲ್ಲದ ತಗಾದೆ ತೆಗೆಯುತ್ತಿರುವ ಅರಣ್ಯ ಸಚಿವರು, ಮಾಜಿ ಸ್ಪೀಕರ್​ ಭೂ ಒತ್ತುವರಿ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ?. ಅರಣ್ಯ ಹಾಗೂ ಕಂದಾಯ ಅಧಿಕಾರಿಗಳು ಅಮಾಯಕ ರೈತರ ಭೂಮಿಯನ್ನು ವೀರಾವೇಶದಲ್ಲಿ ತೆರವು ಮಾಡಿದ್ದಾರೆ. ಆದರೆ, ಮಾಜಿ ಸ್ಪೀಕರ್​ ಬಗ್ಗೆ ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿದರು.

ಗ್ಯಾರಂಟಿ ಹಣೆಬರಹ ನೋಡೋಕೆ ನಾವೇ ಇದ್ದೀವಲ್ಲ

ಕರ್ನಾಟಕದ ಗ್ಯಾರಂಟಿ ಅನುಷ್ಠಾನ ನೋಡಲು ನರೇಂದ್ರ ಮೋದಿ ಅವರನ್ನು ರಾಜ್ಯಕ್ಕೆ ಬರುವಂತೆ ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ. ಆದರೆ, ಪ್ರಧಾನಿಯನ್ನು ಕರೆದು ಇವರೇನು ಮಾಡುತ್ತಾರೆ?, ಇಲ್ಲಿ ಏನೇನು ಆಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪ್ರಧಾನಿಗಳು ಇರಲಿ, ಇಲ್ಲಿನ ದುಸ್ಥಿತಿಯನ್ನು ನಾವೇ ನೋಡುತ್ತಿದ್ದೇವೆ ಎಂದ ಎಚ್​ಡಿಕೆ, ಸಿಎಂ ಹೇಳಿದಂತೆ ಬಿಜೆಪಿಯವರ ಮೇಲೆ ಕೇಸ್​ ಹಾಕಲಿ ನೋಡೋಣ ಎಂದು ಸವಾಲು ಹಾಕಿದರು.

ಸಾಲ ಮಾಡಿದರೆ ತೀರಿಸುವರ್ಯಾರು?

ಮುದ್ರಾಂಕ ಮತ್ತು ನೋಂದಣಿ ಶುಲ್ಕ ಏರಿಕೆ, ಮದ್ಯದ ದರ ಹೆಚ್ಚಳ, ವಿದ್ಯುತ್​ ದುಬಾರಿ ಮಾಡಿ ಮೇಲಿಂದ ಮೇಲೆ ಜನರಿಗೆ ತೆರಿಗೆ ಹಾಕಿ ಹಣ ಸಂಗ್ರಹಿಸಿದರೂ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಈಗ ರಾಜ್ಯ ಸರ್ಕಾರ 1.5 ಲಕ್ಷ ಕೋಟಿ ರೂ. ಸಾಲ ಮಾಡುತ್ತಿದೆ. ಆ ಸಾಲ ತೀರಿಸುವವರು ಯಾರು?, ಬಡ್ಡಿ ಕಟ್ಟುವವರು ಯಾರು?, ಮತ್ತೆ ಸರ್ಕಾರ ಜನರ ಮೇಲೆಯೇ ಹೊರೆ ಹೊರಿಸುತ್ತದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ವಕ್ಫ್​ ವಿವಾದಕ್ಕೆ ಸರ್ಕಾರವೇ ತೆರೆ ಎಳೆಯಲಿ

ರೈತರು, ದೇವಾಲಯಗಳ ಆಸ್ತಿಯನ್ನು ವಕ್ಫ್​ ಆಸ್ತಿ ಎಂದು ದಾಖಲೆ ಬದಲಾಗಲು ಸರ್ಕಾರವೇ ಕಾರಣ. ಈ ವಿವಾದಕ್ಕೆ ಸರ್ಕಾರವೇ ತೆರೆ ಎಳೆಯಬೇಕು. ಸ್ವತ@ ಸಿಎಂ ಅವರೇ ಸೂಚನೆ ಕೊಟ್ಟ ಕಾರಣ ಇಷ್ಟೆಲ್ಲ ಮಾಡುತ್ತಿದ್ದೇವೆ ಎಂದು ವಕ್ಫ್​ ಸಚಿವರೇ ಹೇಳಿದ್ದಾರೆ. ಹೀಗಿದ್ದ ಮೇಲೆ ಸ್ವತ@ ಸಿಎಂ ಅವರೇ ಈ ಗೊಂದಲ ಸರಿ ಮಾಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.