ಜಿಲ್ಲೆ

ಶೇಂಗಾ ಬೀಜ ನುಂಗಿ ಎರಡೂವರೆ ವರ್ಷದ ಮಗು ಸಾವು; ಬದುಕಿಸಿ ಕೊಡುವಂತೆ ಗಣೇಶನಿಗೆ ಅಜ್ಜಿ ಮೊರೆ!

mcbhadrashetti

ಎರಡುವರೆ ವರ್ಷದ ಸಾತ್ವಿಕ್ ಮೃತ ಮಗು. ಮಂಗಳವಾರ ಮಧ್ಯಾಹ್ನ ಆಟ ಆಡುತ್ತಾ ಶೇಂಗಾ ಬೀಜ ನುಂಗಿದ್ದರಿಂದ ಮಗು ಸಾವನ್ನಪ್ಪಿದೆ.

ಯಲ್ಲಾಪುರ; ಶೇಂಗಾ ಬೀಜ ಗಂಟಲಲ್ಲಿ ಸಿಲುಕಿ ಮಗುವೊಂದು ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ.

ದೇವರಾದ್ರು ಮಗುವನ್ನ‌ ಬದುಕಿಸ್ತಾನೆಂಬ  ನಂಬಿಕೆಯಿಂದ ಮಗುವಿನ ಅಜ್ಜಿ ಗಣಪತಿ‌ ದೇವರ ಮೊರೆ ಹೋಗಿದ್ದಾಳೆ.

ಮಗುವನ್ನು ಬದುಕಿಸುವಂತೆ ಗಣಪತಿ ದೇವರ ಮೊರೆ ಹೋದ ಅಜ್ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಮಗು ಸತ್ತಿದ್ದರಿಂದ

ಮೃತ ದೇಹವನ್ನ ದೇವರ ಮುಂದಿಟ್ಟು ಮಗುವನ್ನು ಬದುಕಿಸುವಂತೆ ಪ್ರಾರ್ಥನೆ ಮಾಡಿದ್ದಾಳೆ. ದೇವಾಲಯದ ಗಂಟೆ ಬಾರಿಸುತ್ತಾ ದೇವರಲ್ಲಿ ಪ್ರಾರ್ಥನೆ ಮಾಡಿದ ಅಜ್ಜಿ ಮಗುವನ್ನು ಬದುಕಿಸುವಂತೆ ಗೋಗರಿದಿದ್ದಾಳೆ. ಕಡೆಗೆ ಅಜ್ಜಿಯನ್ನ ಸಂತೈಸಿ  ಸಂಬಂಧಿಕರು ಮನೆಗೆ ಕರೆದುಕೊಂಡು ಹೋಗಿದ್ದಾರೆ.