ಜಿಲ್ಲೆ

ಫೇಸ್​ಬುಕ್​ನಲ್ಲಿ ಜ್ಯೋತಿಷಿಯ ಜಾಹೀರಾತು ನಂಬಿ ಹೋದ ಉದ್ಯಮಿಗೆ ಎದುರಾಯ್ತು ಸಂಕಷ್ಟ!

ತುಮಕೂರು: ಫೇಸ್​ಬುಕ್​ನಲ್ಲಿ ಬಂದ ಜ್ಯೋತಿಷಿಯೊಬ್ಬರ ಜಾಹೀರಾತು ನಂಬಿ ಕೌಟುಂಬಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೋದ ಉದ್ಯಮಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಗರದ ಕೆಇಬಿ ಲೇಔಟ್​ ಸಪ್ತಗಿರಿ ಬಡಾವಣೆ ನಿವಾಸಿ, ಉದ್ಯಮಿ ವಿಜಯ್​ಬಾಬು ಎಂಬುವರ ಮನೆಯ ಕೌಟುಂಬಿಕ ಸಮಸ್ಯೆ ಪರಿಹಾರಕ್ಕೆ ಫೇಸ್​ಬುಕ್​ ಜಾಹೀರಾತು ನೋಡಿ ಜ್ಯೋತಿಷಿಯ ಮೊರೆಹೋಗಿದ್ದರು. ಶಂಕರಶರ್ಮ ಮತ್ತು ಮಾದವರಾವ್​ ಎಂಬುವವರು ಸಮಸ್ಯೆಗೆ ಪರಿಹಾರ ಸೂಚಿಸುವುದಾಗಿ ನಂಬಿಸಿ ಪೂಜೆ, ಹೋಮ, ಹಾಗೂ ವಿವಿಧ ಪೂಜಾ ಕೈಂಕರ್ಯಗಳ ನೆಪದಲ್ಲಿ ಹಂತಹಂತವಾಗಿ ಉದ್ಯಮಿ ಬಳಿ ವಿವಿಧ ಬ್ಯಾಂಕ್​ ಖಾತೆಗಳಿಂದ 46 ಲಕ್ಷ ರೂ. ಪಡೆದಿದ್ದಾರೆ.

ಹಣ ಪಡೆದು ಯಾವುದೇ ಪೂಜೆ ಮಾಡದೆ ಮೊಬೈಲ್​ ಸ್ವಿಚ್ಡ್​ ಆಫ್​ ಮಾಡಿಕೊಂಡು ಕಾಣೆಯಾಗಿದ್ದರಿಂದ ವಿಜಯ್​ಬಾಬು ಅವರು ಸಿಇಎನ್​ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.