ಬೆಂಗಳೂರು: ಕೋಟ್ಯಧೀಶೆ ಅರ್ಚನಾ ರೆಡ್ಡಿ ಕೊಲೆ ಕೇಸ್ನಲ್ಲಿ ಈಕೆಯ ಮಗಳು ಯುವಿಕಾ ರೆಡ್ಡಿ ಮತ್ತು ಅರ್ಚನಾಳ 3ನೇ ಗಂಡ ನವೀನ್ ಕುಮಾರ್ ಸೇರಿ 7 ಮಂದಿನ್ನು ಪೊಲೀಸರು ಬಂಧಿಸಿದ್ದಾರೆ.
ಡಿ.27ರ ರಾತ್ರಿ ಹೊಸೂರು ರಸ್ತೆಯಲ್ಲಿ ಅರ್ಚನಾ ರೆಡ್ಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸಿಸಿ ಟಿವಿ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರಿಗೆ ಅರ್ಚನಾಳ 3ನೇ ಗಂಡ ಮತ್ತು ಈತನ ಇಬ್ಬರು ಸಹಚರರ ಸುಳಿವು ಸಿಕ್ಕಿತ್ತು. ಈ ಜಾಡನ್ನು ಹಿಡಿದು ಹೊರಟ ಪೊಲೀಸರಿಗೆ ಯುವಿಕಾ ರೆಡ್ಡಿಯೂ ಸಿಕ್ಕಿಬಿದ್ದಿದ್ದಾಳೆ.
ಈ ಕುರಿತು ಮಾಹಿತಿ ನೀಡಿದ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ, ಅರ್ಚನಾ ರೆಡ್ಡಿ ಕೊಲೆ ಕೇಸ್ ಸಂಬಂಧ ತನಿಖೆಯಲ್ಲಿ ಮುಖ್ಯವಾದ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ಸಂಪೂರ್ಣ ಮಾಹಿತಿ ಬೆಳಕಿಗೆ ಬಂದಿದೆ. ಸದ್ಯ ಕೊಲೆ ಪ್ರಕರಣ ಸಂಬಂಧ 7 ಆರೋಪಿಗಳನ್ನ ಬಂಧಿಸಿದ್ದೇವೆ. ಅರ್ಚನಾಳ ಆಸ್ತಿಯನ್ನ ಕಬಳಿಸಲು ಈ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕೊಲೆ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ್ದ ವಾಹನ ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. A1 ಆರೋಪಿ ಮತ್ತು ಕೊಲೆಯಾದ ಅರ್ಚನಾ ಇಬ್ಬರೂ ಪತಿ-ಪತ್ನಿಯರಾಗಿದ್ದರು. ಕೊಲೆ ಪ್ರಕರಣದಲ್ಲಿ ಕೊಲೆಯಾದಾಕೆಯ ಮಗಳೂ ಕೂಡ ಆರೋಪಿ. ಈಕೆಯನ್ನೂ ಬಂಧಿಸಲಾಗಿದೆ ಎಂದರು ವಿವರಿಸಿದರು.
ಅರ್ಚನಾ ರೆಡ್ಡಿ ಕೊಲೆ ಕೇಸ್ನಲ್ಲಿ ಬಂಧಿತರು
A1 ಆರೋಪಿ- ನವೀನ್ ಕುಮಾರ್ (ಅರ್ಚನಾಳ 3ನೇ ಗಂಡ)
A2 ಆರೋಪಿ- ಸಂತೋಷ್ (ನವೀನ್ ಸ್ನೇಹಿತ)
A3 ಆರೋಪಿ- ಅನೂಪ್ (ನವೀನ್ ಸ್ನೇಹಿತ)
A4 ಆರೋಪಿ- ಆನಂದ್ (ನವೀನ್ ಸ್ನೇಹಿತ)
A5 ಆರೋಪಿ- ಯುವಿಕಾ ರೆಡ್ಡಿ (ಅರ್ಚನಾ ರೆಡ್ಡಿ ಮಗಳು)
A6 ಆರೋಪಿ- ನರೇಂದ್ರ (ನವೀನ್ ಸ್ನೇಹಿತ)
A7 ಆರೋಪಿ- ದೀಪು (ನವೀನ್ ಸ್ನೇಹಿತ)