ಜಿಲ್ಲೆ

ವಕೀಲರ ಹುದ್ದೆ ನೇಮಕಾತಿ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಅರ್ಜಿ ಆಹ್ವಾನ

arunakunigal

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಗುತ್ತಿಗೆ ಆಧಾರದಲ್ಲಿ 5 ವಕೀಲ ಹುದ್ದೆಗೆ ಬೆಂಗಳೂರು ಮತ್ತು ಧಾರವಾಡ ನ್ಯಾಯಾಲಯದಲ್ಲಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಸೀನಿಯರ್​ ಪ್ಯಾನಲ್​ ಅಡ್ವೊಕೇಟ್​-2 ಹಾಗೂ ಜೂನಿಯರ್​ ಪ್ಯಾನಲ್​ ಅಡ್ವೊಕೇಟ್​-3 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಎರಡೂ ಹುದ್ದೆಗಳಿಗೆ 7ರಿಂದ 12 ವರ್ಷ ವೃತ್ತಿ ಅನುಭವ ಕೇಳಲಾಗಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ/ಎಲ್​ಎಲ್​ಬಿ ಪದವಿ ಪಡೆದಿರಬೇಕು. 11 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಣೆ ಆಗಲಿದೆ.

ವೇತನ: ಸೀನಿಯರ್​ ವಕೀಲರಿಗೆ 50,000 ರೂ. ಮಾಸಿಕ ವೇತನದೊಂದಿಗೆ 5000 ರೂ. ಭತ್ಯೆ, ಜೂನಿಯರ್​ ವಕೀಲರಿಗೆ 40,000 ರೂ.ನೊಂದಿಗೆ 5000 ರೂ. ಭತ್ಯೆ ಇರಲಿದೆ. ಕಾನೂನು ಅಧಿಕಾರಿಗಳು ಹೇಳುವ ಎಲ್ಲ ನಿಯಮಗಳನ್ನು ಕ್ರಮಬದ್ಧವಾಗಿ ಪಾಲಿಸಬೇಕು.

ಅರ್ಜಿ ಸಲ್ಲಿಕೆ: ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 25.4.2022 ರೊಳಗೆ ಸಂಸ್ಥೆಯ ಅಧಿಕೃತ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವದ ಆಧಾರದ ಮೇಲೆ ಕೌನ್ಸಿಲ್​, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಸಂದರ್ಶನಕ್ಕೆ ಹಾಜರಾಗಲು ಯಾವುದೇ ಭತ್ಯೆ ಇರುವುದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳು 100 ರೂ. ಸ್ಟಾಂಪ್​ ಪೇಪರ್​ನಲ್ಲಿ ಅಗ್ರಿಮೆಂಟ್​ ಮಾಡಿಸಬೇಕು.

ಅಧಿಸೂಚನೆಗೆ: https://bit.ly/3xpl764 ನೋಡಬಹುದು.