ಜಿಲ್ಲೆ

ಮಂಡ್ಯ ಮೂಲದ ಯುವ ನಟನ ಬರ್ಬರ ಹತ್ಯೆ: ಚಿತ್ರರಂಗದಲ್ಲಿ ಮಿಂಚುವ ಕನಸು ಕಂಡಿದ್ದ ಸತೀಶ್​ ವಜ್ರ ಇನ್ನಿಲ್ಲ

arunakunigal

ಬೆಂಗಳೂರು: ಮಂಡ್ಯ ಮೂಲದ ಯುವನಟ ಸತೀಶ್​ ವಜ್ರ ಅವರನ್ನು ಶುಕ್ರವಾರ ರಾತ್ರಿ ಕೊಲೆ ಮಾಡಲಾಗಿದೆ. ಕೆಲ ತಿಂಗಳ ಹಿಂದಷ್ಟೇ ಇವರ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು. ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂದು ಕನಸು ಕಂಡಿದ್ದ ಸತೀಶ್​, ಹತ್ಯೆಯಾಗಿದ್ದು ಮಾತ್ರ ದುರಂತ.

ಸೋಷಿಯಲ್‌ ಮೀಡಿಯಾದಲ್ಲಿ ಕಿರುಚಿತ್ರಗಳ ಮೂಲಕ ಫೇಮಸ್ ಆಗಿದ್ದ ಸತೀಶ್ ವಜ್ರ, ಇತ್ತೀಚೆಗೆ 'ಲಗೋರಿ' ಎಂಬ ಕಿರುಚಿತ್ರದ ಮೂಲಕ ಜನರ ಗಮನ ಸೆಳೆದಿದ್ದರು. ಇದಕ್ಕೂ ಮುನ್ನ 'ಕ್ರಶ್​' ಕಿರುಚಿತ್ರಕ್ಕೂ ಬಣ್ಣಹಚ್ಚಿದ್ದರು. ಶುಕ್ರವಾರ ರಾತ್ರಿ ಮನೆಯಲ್ಲೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಸತೀಶ್​ ಅವರು ಯುವತಿಯೊಬ್ಬಳನ್ನು ಪ್ರೀತಿಸಿ ಮದ್ವೆ ಆಗಿದ್ದರು. ಕೆಲ ತಿಂಗಳ ಹಿಂದೆ ಸತೀಶ್​ರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಸತೀಶ್​ ಬರ್ಬರವಾಗಿ ಕೊಲೆಯಾಗಿದ್ದು, ಇವರ ಪತ್ನಿಯ ಸಹೋದರನ ಮೇಲೆ ಅನುಮಾನ ಮೂಡಿದೆ. ಆರ್.ಆರ್ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.