ಜಿಲ್ಲೆ

ಮೈಸೂರಿನ ಜಂಬೂಸವಾರಿಯಲ್ಲಿ ಈ 6 ಸ್ತಬ್ಧಚಿತ್ರಗಳಿಗಷ್ಟೇ ಅವಕಾಶ

arunakunigal

ಮೈಸೂರು: ಈ ಬಾರಿ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ 6 ಟ್ಯಾಬ್ಲೊ(ಸ್ತಬ್ಧಚಿತ್ರ)ಗಳು ಮಾತ್ರವೇ ಪಾಲ್ಗೊಳ್ಳಲಿವೆ.

ಇಂದು ಮುಂಜಾನೆ 6ರ ವೇಳೆಗೆ ಜಯ ಮಾರ್ತಾಂಡ ಗೇಟ್ ಮೂಲಕ ಆಜಾದಿ ಕಾ ಅಮೃತ್, ಕೃಷಿ ಇಲಾಖೆ, ಕೋವಿಡ್ ಜಾಗೃತಿ, ಮುಡಾ ಗುಂಪು ಮನೆ ಯೋಜನೆ, ಪರಿಸರ ಜಾಗೃತಿ, ಅರಮನೆ ವಾದ್ಯಗೋಷ್ಠಿ ಸ್ತಬ್ಧಚಿತ್ರಗಳು ಅರಮನೆಗೆ ಆಗಮಿಸಿದವು.

ಜಂಬೂ ಸವಾರಿಯಲ್ಲಿ ಈ ಬಾರಿ 6 ಟ್ಯಾಬ್ಲೊ ಮಾತ್ರ ಭಾಗಿ

1. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೈಸೂರಿನಲ್ಲಿ ಸೂರಿನ ಬಗ್ಗೆ ಮಾಹಿತಿ ಒಳಗೊಂಡ ಸ್ತಬ್ಧಚಿತ್ರ

2. ಪರಿಸರ ಇಲಾಖೆಯಿಂದ 'ಬೇಡ ನನಗೆ ಕೊಡಲಿ, ನೆರಳನೇಕೆ ಕೊಡಲಿ' ಸ್ತಬ್ಧಚಿತ್ರ

3. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ 'ಸಮಗ್ರ ಕೃಷಿ'

4. ಆರೋಗ್ಯ ಇಲಾಖೆಯಿಂದ 'ಕರೊನಾ‌ ಮುಕ್ತ ಕರ್ನಾಟಕ'.

5. ಮೈಸೂರು ದಸರಾ ಉಪಸಮಿತಿಯಿಂದ 'ಅರಮನೆ ವಾದ್ಯಗೋಷ್ಠಿ' ಸ್ತಬ್ಧಚಿತ್ರ.

6. ಆಜಾದ್ ಕಾ ಅಮೃತ‌ ಮಹೋತ್ಸವ.