ಜಿಲ್ಲೆ

16 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶಿಸಿದ ಸರ್ಕಾರ

ಬೆಂಗಳೂರು: 16 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಆಗಿದ್ದ ಶ್ರೀನಾಥ್ ಮಹದೇವ್ ಜೋಷಿ ಅವರನ್ನು ಲೋಕಾಯುಕ್ತ ಎಸ್ಪಿಯಾಗಿ ವರ್ಗಾವಣೆ ಮಾಡಿದರೆ, ಬೆಂಗಳೂರು ಪೂರ್ವ ವಿಭಾಗದ ಟ್ರಾಫಿಕ್ ಡಿಸಿಪಿ ಆಗಿದ್ದ ಕೆ.ಎಂ. ಶಾಂತರಾಜು ಅವರನ್ನ ಬೆಸ್ಕಾಂ ಎಸ್ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

ಯಾರು? ಎಲ್ಲಿಗೆ ವರ್ಗಾವಣೆ?

ಶ್ರೀನಾಥ್ ಮಹದೇವ್ ಜೋಷಿ- ಲೋಕಾಯುಕ್ತ ಎಸ್ಪಿ

ಕೆ.ಎಂ. ಶಾಂತರಾಜು- ಬೆಸ್ಕಾಂ ಎಸ್ಪಿ

ಸಿಕೆ ಬಾಬಾ- ಡಿಸಿಪಿ, ಆಗ್ನೇಯ ವಿಭಾಗ

ಸಂಜೀವ್ ಎಂ.ಪಾಟೀಲ್- ಬೆಳಗಾವಿ ಎಸ್​ಪಿ

ಕಲಾ ಕೃಷ್ಣಸ್ವಾಮಿ- ಟ್ರಾಫಿಕ್ ಡಿಸಿಪಿ

ಹರೀಶ್ ಪಾಂಡೆ- ಎಸಿಬಿ ಎಸ್ಪಿ

ಲಕ್ಷ್ಮಣ್ ನಿಂಬರಗಿ- ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ

ಶ್ರೀನಾಗೇಶ್- ಚಿಕ್ಕಬಳ್ಳಾಪುರ ಎಸ್ಪಿ

ಲೋಕೇಶ್ ಭರಮಪ್ಪ- ಧಾರವಾಡ ಎಸ್ಪಿ

ಶ್ರೀನಿವಾಸ್ ಗೌಡ- ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ

ಮಿಥುನ್ ಕುಮಾರ್- ಬೆಂಗಳೂರು ಸಿಐಡಿ ಎಸ್ಪಿ

ಕೃಷ್ಣಕಾಂತ್- ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ

ಹರಿರಾಮ್ ಶಂಕರ್- ಹಾಸನ ಎಸ್ಪಿ

ಜಯಪ್ರಕಾಶ್- ಬಾಗಲಕೋಟೆ ಎಸ್ಪಿ

ಶೋಭರಾಣಿ- ಎಸಿಬಿ ಎಸ್​ಪಿ

ಶ್ರೀನಿವಾಸ್ ರಜಪೂತ್- ಹುಮ್ನಾಬಾದ್ ಸಬ್ ಡಿವಿಷನ್ ಎಎಸ್ಪಿ