ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
ತಾಲೂಕಿನಾದ್ಯಂತ ಮಳೆ ಇಲ್ಲದೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಲೋಡ್ ಶೆಡ್ಡಿಂಗ್ ಮಾಡುವುದನ್ನು ನಿಲ್ಲಿಸಿ, ರೈತರ ಪಂಪ್ಸೆಟ್ಗಳಿಗೆ ಹಗಲಿನಲ್ಲಿ ನಿರಂತರ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿ ಬೆಸ್ಕಾಂ ಕಚೇರಿ ಮುಂದೆ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ತಾಲೂಕಿನಾದ್ಯಂತ ಸುಮಾರು 400 ರೈತರು ಅಕ್ರಮ -ಸಕ್ರಮದಲ್ಲಿ 25 ಕೆ.ವಿ. ಟ್ರಾನ್ಸ್ಾಮ್ರ್ ಅಳವಡಿಕೆಗೆ ಬೆಸ್ಕಾಂಗೆ 30,000 ರೂ. ವಂತಿಗೆ ನೀಡಿ 1 ವರ್ಷ ಕಳೆದರೂ ರೈತರಿಗೆ ವೈಯಕ್ತಿಕ ಟ್ರಾನ್ಸ್ಾಮ್ರ್ ಅಳವಡಿಸಿಲ್ಲ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಲೋ-ವೊಲ್ವೇಜ್ನಿಂದ ಪಂಪ್ಸೆಟ್ಗಳು ಸುಟ್ಟು ಹೋಗುತ್ತಿವೆ. ಹೆಚ್ಚುವರಿ 63 ಕೆ.ವಿ. ಟ್ರಾನ್ಸ್ಾಮ್ರ್ ಅಳವಡಿಸಬೇಕು. ಎ.-1 ಪೀಡರ್ನಲ್ಲಿ ಗುಂಡಾಪುರದಿಂದ ಅಲ್ಲಿಪುರಕ್ಕೆ ಒಂದೇ ಲೈನಿನಲ್ಲಿ ವಿದ್ಯುತ್ ಸರಬರಾಜು ಆಗುತ್ತಿದೆ. ತಕ್ಷಣ ಅಲ್ಲಿಪುರಕ್ಕೆ ಬೇರೆ ಲೈನ್ ಅಳವಡಿಸಿಬೇಕು. ವಿದ್ಯುತ್ ಸರಬರಾಜು ಸಮಯದಲ್ಲಿ ಲೈನ್ಮೆನ್ಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ಸೆಕ್ಷನ್ ಆಫೀಸರ್ಗಳು ಅವರ ಕಾರ್ಯವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುವುದು ಸೇರಿ ವಿವಿಧ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು.
ತಾಲೂಕು ರೈತಸಂದ ಅಧ್ಯಕ್ಷ ಲೋಕೇಶ್ಗೌಡ ಮಾತನಾಡಿ, ರೈತರ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕಾರ್ಯಪಾಲಕ ಅಭಿಯಂತರರ ಕಚೇರಿ ಮುಂದೆ ಅರ್ನಿದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಚ್ಚರಿಸಿದರು.
ರೈತ ಸಂದ ಪದಾಧಿಕಾರಿಗಳಾದ ಎಂ.ಆರ್ ಲಕ್ಷ್ಮೀನಾರಾಯಣ್, ಎ. ರಾಮಚಂದ್ರರೆಡ್ಡಿ, ಸನತ್ ಕುಮಾರ್, ಮುದ್ದುರಂಗಪ್ಪ, ಹಿರೇಬಿದನೂರು ರಾಜಣ್ಣ, ಶಶಿಕುಮಾರ್, ಸುರೇಶ್ ಕುಮಾರ್, ಬಾಬು ರಾಮರೆಡಿ,್ಡ ನರಸಿಂಹಮೂರ್ತಿ, ಗೋಪಿನಂದನ್ ಇತರರು ಇದ್ದರು.