ಜಿಲ್ಲೆ

9ರಂದು ಸಂಸ್ಕೃತ ಶ್ಲೋಕಗಳ ಅಂತ್ಯಾಕ್ಷರಿ

reportermys

ಮೈಸೂರು: ನಗರದ ಸರಸ್ವತಿಪುರಂನ ಟಿ.ನಾರಾಯಣಶಾಸ್ತ್ರಿ ಪ್ರತಿಷ್ಠಾನದಿಂದ ಅ.9ರಂದು ಸಂಸ್ಕೃತ ಶ್ಲೋಕಗಳ ಅಂತ್ಯಾಕ್ಷರಿ ಆಯೋಜಿಸಲಾಗಿದೆ.
ಉನ್ನತ ಶಿಕ್ಷಣ ಇಲಾಖೆ ನಿವೃತ್ತ ಅಪರ ನಿರ್ದೇಶಕ ಪ್ರೊ.ಟಿ.ಎನ್.ಪ್ರಭಾಕರ ಅವರು ಅಧ್ಯಕ್ಷತೆ ವಹಿಸಲಿದ್ದು, ಅಮೃತ ವಿದ್ಯಾಲಯ ಪ್ರೌಢಶಾಲೆ ಸಂಸ್ಕೃತ ಶಿಕ್ಷಕ ವಿದ್ವಾನ್ ಎಂ.ಮಂಜುನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿಷ್ಠಾನದ ಕಚೇರಿ, ನಂಬರ್ 435, 8ನೇ ಮುಖ್ಯರಸ್ತೆ, (ಈಜುಕೊಳ)ಯಲ್ಲಿ ಅಂದು ಸಂಜೆ 4ಕ್ಕೆ ಕಾರ್ಯಕ್ರಮ ಜರುಗಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.