ಜಿಲ್ಲೆ

9ರಂದು ನಾಟ್ಯರಂಜಿನಿ ನೃತ್ಯೋತ್ಸವ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ನಾಟ್ಯರಂಜನಿ ನೃತ್ಯ ಕಲಾಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜು.9ರಂದು ಸಂಜೆ 5.30 ಕ್ಕೆ ನಾಟ್ಯರಂಜನಿ ನೃತ್ಯೋತ್ಸವ ಏರ್ಪಡಿಸಲಾಗಿದೆ. ಕಾರ‌್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕಾರ ಭಾರತಿಯ ದಕ್ಷಿಣ ಪ್ರಾಂತ್ಯದ ಪ್ರಧಾನ ಕಾರ‌್ಯ ದರ್ಶಿ ಡಾ.ಕೆ.ರಾಜೀವಲೋಚನ ವಹಿಸುವರು.

ಶ್ರೀ ಅಂಜನಾ ನೃತ್ಯ ಕಲಾಕೇಂದ್ರದ ವಿಧುಷಿ ಡಾ.ನಂದಿನಿಶಿವಪ್ರಕಾಶ್ ಹಾಗೂ ಲಾಸಿಕಾ ಫೌಂಡೇಷನ್ ನೃತ್ಯ ಶಾಲೆಯ ಶ್ವೇತಾಭಟ್ ಅವರನ್ನು ಸನ್ಮಾನಿಸಲಾಗುವುದು. ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ,ಉಪನ್ಯಾಸಕ ಡಾ. ಎಸ್.ಎನ್.ಹೇಮಂತರಾಜು ಭಾಗವಹಿಸುವರೆಂದು ನಾಟ್ಯರಂಜನಿ ನೃತ್ಯ ಕಲಾಕೇಂದ್ರದ ಕಾರ‌್ಯದರ್ಶಿ ಜಿ.ಕಿರಣ್ ತಿಳಿಸಿದ್ದಾರೆ.