ಜಿಲ್ಲೆ

ಮೈಸೂರು ಜಿಲ್ಲೆಯಲ್ಲಿ ಶೇ.97.53ರಷ್ಟು ಸಾಧನೆ

ಅವಿನಾಶ್ ಜೈನಹಳ್ಳಿ

ಮೈಸೂರು: ಮೊದಲ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ ಭಾನುವಾರ ಜಿಲ್ಲಾದ್ಯಂತ ಸಾಂಗವಾಗಿ ನಡೆದಿದ್ದು, ಬಹುತೇಕ ಮೊದಲ ದಿನವಾದ ಭಾನುವಾರವೇ ನಿಗದಿತ ಗುರಿಯಲ್ಲಿ ಶೇ.97.53ರಷ್ಟು ಸಾಧನೆ ಮಾಡಲಾಗಿದೆ.

2,31,354 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿತ್ತು. ಅದರಲ್ಲಿ ಮೊದಲ ದಿನವೇ 2,25,629 ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗಿದೆ. ಇನ್ನುಳಿದ ಮಕ್ಕಳಿಗೆ ಮಾ.6ರವರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಪೋಲಿಯೋ ಹನಿ ಹಾಕಲಿದ್ದಾರೆ.

  • ತಾಲೂಕುವಾರು ಸಾಧನೆ
  • ಕೆ.ಆರ್.ನಗರ 100.87
  • ಪಿರಿಯಾಪಟ್ಟಣ 98.91
  • ಎಚ್.ಡಿ.ಕೋಟೆ 95.58
  • ಹುಣಸೂರು 99.02
  • ನಂಜನಗೂಡು 96.73
  • ತಿ.ನರಸೀಪುರ 99.21
  • ಮೈಸೂರು 96.80