ಹೊಸನಗರ ಕೋರ್ಟ್‌ನಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪಾಲ್ಗೊಂಡವರು. 
ಜಿಲ್ಲೆ

958 ಪ್ರಕರಣ ರಾಜಿ ಸಂಧಾನ

Shivamogga - Desk - Praveena Kumar S

ಹೊಸನಗರ: ಪಟ್ಟಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 1,832 ಪ್ರಕರಣ ಆಯ್ಕೆ ಮಾಡಿ 958 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಗಿದೆ. ಹಿರಿಯ ವ್ಯವಹಾರ ನ್ಯಾಯಾಲಯದಲ್ಲಿ 1,075 ಪ್ರಕರಣದಲ್ಲಿ 322 ಪ್ರಕರಣ, ಪ್ರಧಾನ ವ್ಯವಹಾರ ನ್ಯಾಯಾಲಯದಲ್ಲಿ 686 ಪ್ರಕರಣದಲ್ಲಿ 612, ಹೆಚ್ಚುವರಿ ನ್ಯಾಯಾಲಯದ ವ್ಯಾಪ್ತಿಯಲ್ಲಿ 71 ಪ್ರಕರಣ ಆಯ್ಕೆ ಮಾಡಿ 24 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಗಿದೆ. ಈ ವೇಳೆ ವಕೀಲರು, ಸಿಬ್ಬಂದಿ, ಕಕ್ಷಿದಾರರು ಭಾಗವಹಿಸಿದ್ದರು. ಒಟ್ಟು ಪ್ರಕರಣದಿಂದ 1 ಕೋಟಿ ರೂ.ಗೂ ಹೆಚ್ಚು ದಂಡ ವಿಧಿಸಲಾಗಿದೆ.