ಬಂಟ್ವಾಳ: ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ 333.52 ಕೋಟಿ ರೂ.ವ್ಯವಹಾರ ನಡೆಸಿ, 95.48ಲಕ್ಷ ರೂ. ಲಾಭಗಳಿಸಿದೆ. ಶೇ.13 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷ ಸುಭಾಶ್ಚಂದ್ರ ಜೈನ್ ತಿಳಿಸಿದರು.
ಶನಿವಾರ ಬಿ.ಸಿ.ರೋಡ್‌ನಲ್ಲಿ ಜರುಗಿದ ಮಹಾಸಭೆಯಲ್ಲಿ 2023-24ರ ಸಾಲಿನ ವ್ಯವಹಾರದ ಪ್ರಗತಿಯ ಅಂಕಿ-ಅಂಶ ನೀಡಿ 1.55 ರೂ. ಕೋಟಿ ಪಾಲು ಬಂಡವಾಳ, 2.50 ಕೋಟಿ ರೂ. ಸ್ವಂತ ನಿಧಿ, 61.13 ಕೋಟಿ ರೂ.ಠೇವಣಾತಿ ಹಾಗೂ 55.44 ಕೋಟಿ ರೂ. ಹೊರಬಾಕಿ ಸಾಲ ಹೊಂದಿ ಸರ್ವಾಂಗೀಣ ಅಭಿವೃದ್ದಿ ಸಾಧಿಸಿರುವುದಕ್ಕೆ ಗ್ರಾಹಕರು ಸಂಸ್ಥೆಯ ಮೇಲೆ ಇಟ್ಟಿರುವ ವಿಶ್ವಾಸ ಕಾರಣ ಎಂದರು.
ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಸಂಸ್ಥೆಯ ಸದಸ್ಯರ ಹಾಗೂ ಸಿಬ್ಬಂದಿಯ ಮಕ್ಕಳಿಗೆ, ಕನ್ನಡ ಮಾಧ್ಯಮದಲ್ಲಿ ಕಲಿತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕೂಡ ಪ್ರತಿಭಾ ಪುರಸ್ಕಾರ ನೀಡಲಾಯಿತು. 23 ಎಸ್.ಎಸ್.ಎಲ್.ಸಿ. ಹಾಗೂ 16 ಪಿ.ಯು.ಸಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷ ಮಂಜುನಾಥ ರೈ, ನಿರ್ದೇಶಕರಾದ ಸ್ವಪ್ನಾ ರಾಜರತ್ನ, ರಾಜೇಶ್ ಬಿ., ಜೆ.ಗಜೇಂದ್ರ ಪ್ರಭು, ದಿವಾಕರ ದಾಸ್, ಹೇಮಂತ್ ಕುಮಾರ್ ಜೈನ್, ರವೀಂದ್ರ, ನಾರಾಯಣ ಸಿ. ಪೆರ್ನೆ, ಡಾ.ಸುದೀಪ್ ಕುಮಾರ್, ಲೋಕೇಶ್ ಸುವರ್ಣ, ಬಟ್ಯಪ್ಪ ಶೆಟ್ಟಿ, ಜಯರಾಜ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಜೈನ್ ಉಪಸ್ಥಿತರಿದ್ದರು.
ನಿರ್ದೇಶಕರಾದ ಮೈಕಲ್ ಡಿ’ಕೋಸ್ತಾ ಸ್ವಾಗತಿಸಿ, ಸುಧಾಕರ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು, ಬಂಟ್ವಾಳ ಶಾಖೆಯ ಶಾಖಾಧಿಕಾರಿ ಸ್ವಪ್ನ ಚಂದ್ರಪ್ರಭ ವರದಿ ಮಂಡಿಸಿದರು, ರಾಯಿ ಶಾಖೆಯ ಶಾಖಾಧಿಕಾರಿ ಮೋಹನ್ ಜಿ. ಮೂಲ್ಯ ಮಹಾಸಭೆ ನೋಟಿಸು ಓದಿ ದಾಖಲಿಸಿದರು ನಿರ್ದೆಶಕಿ ವಿಜಯ ಕುಮಾರಿ ಇಂದ್ರ ವಂದಿಸಿದರು. ಸದಸ್ಯರು, ಸಿಬ್ಬಂದಿ ಹಾಗೂ ನಿರ್ದೇಶಕರಿಂದ ಸಂಗೀತ ರಸಮಂಜರಿ ಹಾಗೂ ಶ್ರೀ ಕೃಷ್ಣ ಲೀಲೆ-ಕಂಸ ವಧೆ ಯಕ್ಷಗಾನ ಬಯಲಾಟ ಆಯೋಜಿಸಲಾಗಿತ್ತು.