ಹುಬ್ಬಳ್ಳಿ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸಬಹುದೆಂದು ನಂಬಿಸಿದ ವಂಚಕರು, ನಗರದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 93.68 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ನಗರದ ಗುರುರಾಜ ಕೆ. ಎಂಬುವವರಿಗೆ ಸಾಯಿ ಮರಾಠಾ, ಜಿತೇಂದ್ರ ಬಹದ್ದೂರ ಎಂಬುವವರು ವಂಚಿಸಿದ್ದಾರೆ.
ಇಂಡಿಯಾ ಇನ್‌ಟ್ರೇಡಿ ಟ್ರೇಡಿಂಗ್ 8 ಎನ್ನುವ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಗುರುರಾಜ ಅವರನ್ನು ಸೇರಿಸಿದ್ದಾರೆ. ನಂತರ ಸಿಎಚ್‌ಸಿಪಿ ಸೆಸ್ ಎಂಬ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಸಿಕೊಟ್ಟು ಷೇರು ಮಾರುಕಟ್ಟೆ ವ್ಯವಹಾರ ಮಾಡುವಂತೆ ತಿಳಿಸಿದ್ದಾರೆ. ನಂತರ ವಿವಿಧ ಅಕೌಂಟ್‌ಗಳ ಮೂಲಕ 50 ಸಾವಿರ ರೂ. ಗುರುರಾಜಗೆ ಹಾಕಿದ್ದಾರೆ. ನಂತರ ವಾಲ್ ಟೀಮ್ 1 ನಾಮೆಯ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರಿಸಿ ಹಂತ ಹಂತವಾಗಿ 93,68,500 ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ಗುರುರಾಜಗೆ ಮೋಸ ಮಾಡಿದ್ದರ ಕುರಿತು ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.