ಸೋಮವಾರಪೇಟೆ : ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನಲ್ಲಿ 91.43 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್. ಬಿ. ಶಿವಕುಮಾರ್ ತಿಳಿಸಿದರು.
ಸಂಘದ ಸಭಾಂಗಣದಲ್ಲಿ ಭಾನುವಾರ ಜರುಗಿದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದಲ್ಲಿ 740 ಪೂರ್ಣ ಪಾಲು ಹೊಂದಿದ ಸದಸ್ಯರು ಇದ್ದು ರೂ. 2,28,36,000 ರೂ. ಪಾಲು ಬಂಡವಾಳವಿದೆ. ಒಟ್ಟು 32,79,32,000 ರೂ. ಸಾಲ ವಿತರಿಸಲಾಗಿದೆ. ಸಂಘದಲ್ಲಿ ಉಳಿತಾಯ ಠೇವಣಿ ಹಾಗೂ ಪಿಗ್ಮಿಠೇವಣಿ ಮತ್ತು ಸ್ವ-ಸಹಾಯ ಗುಂಪಿನ ಉಳಿತಾಯ ಠೇವಣಿ ಒಟ್ಟು ಸೇರಿ 13.16 ಕೋಟಿ ರೂ. ಠೇವಣಿಗಳು ಇಡಲಾಗಿದೆ ಎಂದರು.
ಇದೇ ಸಂದರ್ ಪ್ರಥಮವಾಗಿ ಕೆಸಿಸಿ ಸಾಲ ಮರುಪಾವತಿಸಿದ ಸಣ್ಣ ಹಾಗೂ ದೊಡ್ಡ ರೈತರಿಗೆ, ಸ್ವಸಹಾಯ ಗುಂಪುಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಎಸ್‌ಎಸ್‌ಎಲ್‌ಸಿ ದ್ವಿತೀಯ ಪಿಯುಸಿ ಹಾಗೂ ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ರಾದ ಡಿ.ಎಸ್.ಚಂಗಪ್ಪ, ನಿರ್ದೇಶಕರಾದ ಡಿ. ಎಚ್.ವಿಶ್ವನಾಥರಾಜೇ ಅರಸ್, ಕೆ.ಪಿ.ರೋಷನ್, ಎಲ್.ಎಂ.ರಾಜೇಶ್, ಸುನು ಕಿಶೋರ್, ಬಿ.ಕೆ.ದಾಕ್ಷಾಯಿಣಿ, ಕೆ.ಈ.ಕುಟ್ಟಪ್ಪ, ಎಸ್. ಬಿ. ಸಂತೋಷ್, ಎಸ್.ಪಿ.ಕೀರ್ತಿಪ್ರಸಾದ್, ಕೆ.ಎಲ್.ಹೊನ್ನಪ್ಪ, ಎಚ್. ಜೆ.ಬಸಪ್ಪ, ಎಸ್.ಕೆ. ಲಕ್ಷ ್ಮಣ ಹಾಗೂ ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಎ. ಎ. ಡಿಕ್ಕಿರಾಜು ಇದ್ದರು.