ಬೆಳಗಾವಿ ಜಿಲ್ಲೆಯ ಖಾನಾಪುರ ವಲಯದ ಅಬಕಾರಿ ಪೊಲೀಸರು ಬಂಧಿಸಿರುವ ಆರೋಪಿ ಜತೆ ವಶಪಡಿಸಿಕೊಂಡಿರುವ ಗೋವಾ ಮದ್ಯದ ಬಾಕ್ಸ್‌ಗಳು. ದಾವಲಸಾಬ್ ಶಿಂಧೋಗಿ, ಸದಾಶಿವ ಕೊರ್ತಿ, ಜಯರಾಮ ಹೆಗಡೆ ಇತರರಿದ್ದರು. 
ಜಿಲ್ಲೆ

909 ಲೀಟರ್ ಗೋವಾ ಮದ್ಯ ವಶ

ಬೆಳಗಾವಿ: ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದಾಗ ಅಬಕಾರಿ ಪೊಲೀಸರು ಸೋಮವಾರ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ ಆತನಿಂದ 909 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದ ಗೋಪಾಲ ಗಾವಡೆ ಬಂಧಿತ ವ್ಯಕ್ತಿ. ಗೋವಾ ರಾಜ್ಯದ ಮದ್ಯದ ಬಾಕ್ಸ್‌ಗಳನ್ನು ಸಂಗ್ರಹಿಸಿ ಬೆಳಗಾವಿ ಜಿಲ್ಲೆಯ ಕಣಕುಂಬಿ ಮಾರ್ಗವಾಗಿ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಸಾಗಣೆ ಮಾಡುತ್ತಿರುವ ಸಂದರ್ಭದಲ್ಲಿ ಖಾನಾಪುರ ವಲಯದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿವಿಧ ಕಂಪನಿಯ 22 ಮದ್ಯದ
ಬಾಕ್ಸ್‌ಗಳು ಪತ್ತೆಯಾಗಿವೆ. ಗೋವಾದಲ್ಲಿ ಅಗ್ಗದ ದರದಲ್ಲಿ ಮಾರಾಟವಾಗುತ್ತಿರುವ ವಿವಿಧ ಕಂಪನಿಯ ಮದ್ಯವನ್ನು ಸಂಗ್ರಹಿಸಿ ಅಕ್ರಮವಾಗಿ ಕರ್ನಾಟಕ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಗೆ ಸಾಗಣೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ವಾಹನಗಳ ತಪಾಸಣೆ ವೇಳೆ ಗೋವಾ ಮದ್ಯದ ಬಾಕ್ಸ್‌ಗಳು
ಪತ್ತೆಯಾಗಿವೆ. ಬಂಧಿತ ವ್ಯಕ್ತಿಯಿಂದ 909 ಲೀಟರ್ ಮದ್ಯ, ವಾಹನ ಸೇರಿ 9.33 ಲಕ್ಷ ರೂ. ಮೌಲ್ಯದ ವಸ್ತು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ ನಿರೀಕ್ಷಕರಾದ ದಾವಲಸಾಬ್ ಶಿಂಧೋಗಿ, ಸದಾಶಿವ ಕೊರ್ತಿ, ಅಬಕಾರಿ ಉಪ ನಿರೀಕ್ಷಕ ಜಯರಾಮ ಹೆಗಡೆ, ಪುಷ್ಪಾ ಗದಾಡೆ ನೇತೃತ್ವದಲ್ಲಿ ಸಿಬ್ಬಂದಿ
ಮಂಜುನಾಥ ಬಳಗಪ್ಪನವರ, ಈರಣ್ಣ ಗಾಳಿ, ಪ್ರಕಾಶ ಡೋಣಿ, ಅರುಣಕುಮಾರ ಬಂಡಿಗಿ, ರಾಯಪ್ಪ ಮಣ್ಣಿಕೇರಿ ತಂಡವು ದಾಳಿ ನಡೆಸಿದೆ.