ಕಲಬುರಗಿ: ಗೋವುಗಳ ವಧೆ ಮಾಡಬಾರದು ಎಂಬ ಕರ್ನಾಟಕ ಸರ್ಕಾರದ ಆದೇಶ ಉಲ್ಲಂಘಿಸಿ ನಗರ ಸೇರಿ ಜಿಲ್ಲೆಯಲ್ಲಿ 9,000 ಗೋವುಗಳ ಹತ್ಯೆ ಮಾಡಲಾಗಿದೆ ಎಂದು ಹಿಂದುಪರ ಸಂಘಟನೆಯ ಮಲ್ಲಿಕಾರ್ಜುನ ಕೋಡ್ಲಿ ಆರೋಪಿಸಿದರು.
ಬಕ್ರೀದ್ ನಿಮಿತ್ತ ಗೋವುಗಳ ವಧೆ ಮಾಡಲಾಗಿದೆ. ಆದರೆ ಕ್ರಮ ಕೈಗೊಳ್ಳಬೇಕಿದ್ದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಾಥ್ ನೀಡಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಹತ್ಯೆಯಾದ ಗೋ ಮಾಂಸದ ತ್ಯಾಜ್ಯವನ್ನು ಮಹಾನಗರ ಪಾಲಿಕೆ ವಾಹನಗಳ ಮೂಲಕವೇ ಸಾಗಿಸಲಾಗಿದೆ. ಅದಕ್ಕಾಗಿ ಪ್ರತ್ಯೇಕವಾಗಿ ಉತ್ತರ ಎಸಿಪಿ ಚಂದ್ರಶೇಖರ ಮನೆ ಮನೆಗೆ ಕಿಟ್ ವಿತರಿಸುವುದಾಗಿ ಹೇಳಿಕೆ ನೀಡಿದ್ದರು. ಅದರಂತೆ ಹಿಂದು ಪೌರಕಾರ್ಮಿಕರ ಮೂಲಕವೇ ಗೋ ಮಾಂಸದ ತ್ಯಾಜ್ಯ ವಿಲೇವಾರಿ ಮಾಡಿಸಲಾಗಿದೆ ಎಂದು ಕಿಡಿಕಾರಿದರು.
ಜಿಲ್ಲಾಧಿಕಾರಿಗಳು ಸಭೆ ನಡೆಸಿ ಗೋವುಗಳ ವಧೆ ಮಾಡುವಂತಿಲ್ಲ. ರಕ್ಷಣೆಗೆ ತಂಡ ಮಾಡಿz್ದÉÃವೆ ಎಂದಿದ್ದರು. ಆದರೆ ಯಾವೊಂದು ಗೋವಿನ ರಕ್ಷಣೆ ಮಾಡಿಲ್ಲ. ಜಿಲ್ಲಾಡಳಿತದ ಆದೇಶ ಮೀರಿ ಜಿಲ್ಲೆಯಲ್ಲಿ ಸುಮಾರು ೯೦೦೦ ಗೋವುಗಳ ಹತ್ಯೆ ಮಾಡಲಾಗಿದೆ. ಇದಕ್ಕೆ ಜಿಲ್ಲಾಡಳಿತವೇ ನೆರ ಹೊಣೆ. ಅಲ್ಲದೆ ತ್ಯಾಜ್ಯ ವಿಲೇವಾರಿಗೆ ಕಿಟ್ ವಿತರಿಸುತ್ತೇವೆ ಎಂದು ಹೇಳಿ ಬಹಿರಂಗ ಬೆಂಬಲಕ್ಕೆ ನಿಂತ ಎಸಿಪಿ ಚಂದ್ರಶೇಖರ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಬಕ್ರೀದ್ ಹಿನ್ನೆಲೆಯಲ್ಲಿ ಗೋವುಗಳ ಹತ್ಯೆ ಕುರಿತು ಹಬ್ಬಕ್ಕೆ ಮುನ್ನವೇ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ತಹಸೀಲ್ದಾರ್ ಮತ್ತು ಪಶುಸಂಗೋಪನೆ ಇಲಾಖೆಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಈಗಲಾದರೂ ಗೋಹತ್ಯೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಸ್ತುವಾರಿ ಸಚಿವರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಪ್ರಮುಖರಾದ ಅಶ್ವಿನಕುಮಾರ ಡಿ., ಪ್ರಶಾಂತ ಗುಡ್ಡಾ, ಲಕ್ಷಿö್ಮÃಕಾಂತ ಸ್ವಾದಿ, ಮಹೇಶ ಕೆಂಭಾವಿ ಇತರರಿದ್ದರು.