ಮದ್ದೂರು ತಾಲೂಕಿನ ವೈದ್ಯನಾಥಪುರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆ ವೇಳೆ ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳಾದ ಅಪ್ಪು.ಪಿ.ಗೌಡ, ವಿ.ಕೆ.ನಾಣಯ್ಯ, ವಿ.ಎನ್.ಕೃಷ್ಣ, ವಿ.ಎ.ನಾರಾಯಣ,ಎಸ್.ಶಂಕರ ,ವಿ.ಆರ್.ಸಿದ್ದಪ್ಪ, ಸುರೇಶ, ರತ್ನಮ್ಮ ವಿ.ಎಂ.ಸಿದ್ದಪ್ಪ, ವಿಶಾಲಿಅಂಕಯ್ಯ ಆಯ್ಕೆಗೊಂಡರು ಇವರನ್ನು ಗ್ರಾಮಸ್ಥರು ಅಭಿನಂದಿಸಿದರು. 
ಜಿಲ್ಲೆ

ವೈದ್ಯನಾಥಪುರ ಡೇರಿಗೆ 9 ನಿರ್ದೇಶಕರ ಆಯ್ಕೆ

ಮದ್ದೂರು : ತಾಲೂಕಿನ ವೈದ್ಯನಾಥಪುರ ಹಾಲು ಉತ್ಪಾದಕರ ಸಹಕಾರ ಸಂಘದ 9 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್.ಡಿ.ಎ. ಬೆಂಬಲಿತ ಎಲ್ಲ ಅಭ್ಯರ್ಥಿಗಳು (ಅಪ್ಪು ಪಿ.ಗೌಡ ಅವರ ಗುಂಪಿನ ಅಭ್ಯರ್ಥಿಗಳು) ಜಯಭೇರಿ ಬಾರಿಸಿದರು.

ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳಾದ ಅಪ್ಪು ಪಿ.ಗೌಡ, ವಿ.ಕೆ.ನಾಣಯ್ಯ, ವಿ.ಎನ್.ಕೃಷ್ಣ, ವಿ.ಎ.ನಾರಾಯಣ, ಎಸ್.ಶಂಕರ, ವಿ.ಆರ್.ಸಿದ್ದಪ್ಪ, ಸುರೇಶ ಚುನಾವಣೆ ವೇಳೆ ಜಯ ಗಳಿಸಿದರು.

ಅವಿರೋಧ ಆಯ್ಕೆ: ಮಹಿಳಾ ಮೀಸಲು ಪ್ರಕ್ರಿಯೆಯಲ್ಲಿ ರತ್ನಮ್ಮ ವಿ.ಎಂ.ಸಿದ್ದಪ್ಪ, ವಿಶಾಲಿ ಅಂಕಯ್ಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ವೇಳೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಹಿಂದಿನ ಆಡಳಿತ ಮಂಡಳಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆ ವೇಳೆ ಚುನಾವಣಾಧಿಕಾರಿಗಳಾದ ಸಹಾಯಕ ನಿಬಂಧಕ ಅಧಿಕಾರಿ ತ್ಯಾಗರಾಜ್‌ಪ್ರಸಾದ್ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದರು. ಆಯ್ಕೆಯಾದ ಅಭ್ಯರ್ಥಿಗಳ ಪರವಾಗಿ ಮಾತನಾಡಿದ ನೂತನ ನಿರ್ದೇಶಕ ಅಪ್ಪು ಪಿ.ಗೌಡ, ತಮ್ಮ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಿದ ವೈದ್ಯನಾಥಪುರ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರಿಗೆ ಅಭಿನಂದನೆ ತಿಳಿಸಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲ ನಿರ್ದೇಶಕರ ವಿಶ್ವಾಸ ಪಡೆದು ಹಾಲು ಉತ್ಪಾದಕರ ಘಟಕವನ್ನು ಉನ್ನತ ದರ್ಜೆಗೇರಿಸುವ ಜತೆಗೆ ಹಾಲು ಉತ್ಪಾದಕರಿಗೆ ಎಲ್ಲ ರೀತಿಯ ಅನುಕೂಲ ಮಾಡುವ ಬಗ್ಗೆ ಭರವಸೆ ನೀಡಿದರು.