ನುಗ್ಗೇಹಳ್ಳಿ ಹೋಬಳಿಯ ಅಗ್ರಹಾರ ಬೆಳಗುಲಿಯ ಇತಿಹಾಸ ಪ್ರಸಿದ್ಧ ವಿದ್ಯಾಗಣಪತಿ ಕ್ಷೇತ್ರದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬೆಳಗುಲಿ ಪ್ರಕೃತಿ ಜ್ಞಾನವಿಕಾಸ ಕೇಂದ್ರದ ಒಂದನೇ ವಾರ್ಷಿಕೋತ್ಸವ ಹಾಗೂ ಲಕ್ಷ್ಮೀ ಪೂಜಾ ಸಮಾರಂಭವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕಿ ಕಲ್ಯಾಣಿ ಉದ್ಘಾಟಿಸಿದರು. ಭಾಗ್ಯಲಕ್ಷ್ಮೀ, ಲೋಕೇಶ್, ಚನ್ನೇಗೌಡ, ಶರತ್, ಲಕ್ಷ್ಮೀ, ಗೌರಮ್ಮ, ರಾಣಿ, ಶ್ರುತಿ ಇದ್ದರು. 
ಜಿಲ್ಲೆ

9 ಕೋಟಿ ರೂ. ಸಾಲ ವಿತರಣೆ

ನುಗ್ಗೇಹಳ್ಳಿ: ಕಾರೆಹಳ್ಳಿ ವಲಯದ 370 ಸ್ವಸಹಾಯ ಸಂಘಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶೇ.14ರಷ್ಟು ಬಡ್ಡಿ ದರದಲ್ಲಿ 9 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ತಿಪಟೂರು ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಕಲ್ಯಾಣಿ ತಿಳಿಸಿದರು.

ಹೋಬಳಿಯ ಅಗ್ರಹಾರ ಬೆಳಗುಲಿ ಇತಿಹಾಸ ಪ್ರಸಿದ್ಧ ಗಣಪತಿ ದೇವಾಲಯದ ಕ್ಷೇತ್ರದ ಸಮುದಾಯ ಭವನದಲ್ಲಿ ಶನಿವಾರ ಬೆಳಗುಲಿ ಪ್ರಕೃತಿ ಜ್ಞಾನವಿಕಾಸ ಕೇಂದ್ರದ ಒಂದನೇ ವಾರ್ಷಿಕೋತ್ಸವ ಹಾಗೂ ಲಕ್ಷ್ಮೀ ಪೂಜಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಈ ಭಾಗದಲ್ಲಿ ಸ್ವಉದ್ಯೋಗ ಕಲ್ಪಿಸಲು 50 ಲಕ್ಷ ರೂ. ಸಾಲ ನೀಡಲಾಗಿದೆ. ದೇವಾಲಯಗಳ ಜೀರ್ಣೋದ್ಧಾರಕ್ಕೆ 5 ಲಕ್ಷ ರೂ. ನೀಡಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಸಮನ್ವಯಾಧಿಕಾರಿ ಭಾಗ್ಯಲಕ್ಷ್ಮೀ, ಪತ್ರಕರ್ತ ಬಿ.ಸಿ.ಚನ್ನೇಗೌಡ, ಬಿ.ಕೆ.ಶರತ್, ಗೌರಮ್ಮ, ರಾಣಿ, ಶ್ರುತಿ, ಮಂಜುಳಾ, ಪವಿತ್ರಾ, ಸವಿತಾ, ಸಂಘದ ಸದಸ್ಯರು ಇತರರು ಹಾಜರಿದ್ದರು.