ಜಿಲ್ಲೆ

ಕಾಫಿನಾಡಲ್ಲಿ 9 ಮಂದಿಗೆ ಕರೊನಾ ಸೋಂಕು

madikerimailmanju

ಚಿಕ್ಕಮಗಳೂರು: ಕಾಫಿನಾಡಲ್ಲಿ ಶುಕ್ರವಾರ 51 ಮಂದಿ ಸಂಪೂರ್ಣ ಗುಣ ಹೊಂದಿ ಬಿಡುಗಡೆಯಾಗಿದ್ದು 9 ಜನರಲ್ಲಿ ಸೋಂಕು ಪತ್ತೆಯಾಗಿದೆತಾಲೂಕುವಾರು ತರೀಕೆರೆಯ ಮೂವರು, ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಕಡೂರಿನ ತಲಾ ಇಬ್ಬರು ಸೋಂಕಿತರಲ್ಲಿ ಸೇರಿದ್ದಾರೆ.

ಜಿಲ್ಲೆಯಲ್ಲಿ 176 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 12991 ಮಂದಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದು ಅವರಲ್ಲಿ 12678 ಮಂದಿ ಸಂಪೂರ್ಣ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 137 ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರ ಪತ್ತೆಯಾದವರಲ್ಲಿ ಹೋಂ ಐಸೊಲೇಶನ್‍ನಲ್ಲಿ 6 , ಖಾಸಗಿ ಅಸ್ಪತ್ರೆಯಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.