ಜಿಲ್ಲೆ

9.89 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ

ಮರಿದೇವ ಹೂಗಾರ

ಹುಬ್ಬಳ್ಳಿ: ಪಾರ್ಟ್‌ಟೈಮ್ ಜಾಬ್ ಕೊಡಿಸುವ ಸಂದೇಶ ಕಳುಹಿಸಿದ ವಂಚಕರು, ನಗರದ ಖಾಸಗಿ ಕಂಪನಿ ನೌಕರನ ಬ್ಯಾಂಕ್ ಖಾತೆಯಿಂದ 9.89 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಬಸವರಾಜ ಬಡಿಗೇರ ವಂಚನೆಗೆ ಒಳಗಾದವರು. ವಾಟ್ಸ್ ಆ್ಯಪ್‌ನಲ್ಲಿ ಜಾಬ್ ಸಂದೇಶದ ಲಿಂಕ್ ಕಳುಹಿಸಿದ ವಂಚಕರು, ಹೋಟೆಲ್‌ಗೆ ರಿವ್ಯೆವ್ ಫೈವ್ ಸ್ಟಾರ್ ರೇಟಿಂಗ್ ಕೊಡಬೇಕು. ಟಾಸ್ಕ್ ಪೂರ್ಣಗೊಳಿಸಿ ಹಣ ಹೂಡಿಕೆ ಮಾಡಬೇಕು. ಇದರಿಂದ ಕಮಿಷನ್ ಸಿಗುತ್ತದೆ. ಸಾವಿರ ರೂ. ಹೂಡಿಕೆ ಮಾಡಿದರೆ ಶೇ. 30ರಷ್ಟು ಲಾಭಾಂಶ ಸಿಗುತ್ತದೆ ಎಂದು ನಂಬಿಸಿದ್ದಾರೆ. ಆಸೆಗೆ ಬಿದ್ದ ಬಸವರಾಜ ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಂದ 9,89,126 ರೂ. ವರ್ಗಾಯಿಸಿ ವಂಚನೆಗೆ ಒಳಗಾಗಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.