ಜಿಲ್ಲೆ

ಚಿನ್ಮಯ ಮಿಷನ್‌ನಿಂದ 8ನೇ ಮನೆ ಹಸ್ತಾಂತರ

Avinash R

ಕಾಸರಗೋಡು: ಚಿನ್ಮಯ ಮಿಷನ್‌ನ ‘ವಸತಿಯಿಲ್ಲದವರಿಗೊಂದು ಮನೆ’ ಯೋಜನೆಯನ್ವಯ ನಿರ್ಮಿಸಲಾದ ಎಂಟನೇ ಮನೆಯ ಕೀಲಿಕೈಯನ್ನು ಚಿನ್ಮಯ ಮಿಷನ್ ಕೇರಳದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ, ಗಣೇಶನ್ ಮೊಗ್ರಾಲ್ ಅವರಿಗೆ ಹಸ್ತಾಂತರಿಸಿದರು.

ವಿದ್ಯಾನಗರ ಚಿನ್ಮಯ ಮಿಷನ್ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಚಿನ್ಮಯ ಮಿಷನ್ ಅಧ್ಯಕ್ಷ ಎ.ಕೆ.ನಾಯರ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಚಾರಿಣಿ ದಿಶಾ ಚೈತನ್ಯ, ಬಿ.ಪ್ರಶಾಂತ, ಪೂರ್ಣಿಮಾ ಪ್ರದೀಪ್ ಮತ್ತು ಸಿಂಧು ಶಶೀಂದ್ರನ್ ಉಪಸ್ಥಿತರಿದ್ದರು.

ಚಿನ್ಮಯ ಮಿಷನ್‌ನ ವಸತಿ ಯೋಜನೆಗೆ ಹೆಚ್ಚಿನ ಕೊಡುಗೆ ನೀಡಿರುವ ಇಂದಿರಾ ರಾಧಾಕೃಷ್ಣನ್ ಮತ್ತು ಗುತ್ತಿಗೆದಾರ ದಿನೇಶ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಚಿನ್ಮಯ ಮಿಷನ್ ಕಾರ್ಯದರ್ಶಿ ಕೆ.ಬಾಲಚಂದ್ರನ್ ಸ್ವಾಗತಿಸಿದರು. ವಿದ್ಯಾಲಯದ ಪ್ರಾಂಶುಪಾಲ ಕೆ.ಸಿ.ಸುನೀಲ್ ಕುಮಾರ್ ವಂದಿಸಿದರು.