ಜಿಲ್ಲೆ

8ಪಿಎಂ ಕಿಂಗ್ಸ್ ತಂಡಕ್ಕೆ ಪ್ರಶಸ್ತಿ

Dharwada - Santosh Vaidya

ಹುಬ್ಬಳ್ಳಿ: ಕರ್ನಾಟಕ ಜಿಮಖಾನ್ ಅಸೋಸಿಯೇಶನ್ (ಕೆಜಿಎ) ನಲ್ಲಿ ಸುಮಾರು 2 ತಿಂಗಳಿಂದ ನಡೆದ 2ನೇ ಆವೃತ್ತಿಯ ಕರ್ನಾಟಕ ಜಿಮ್ಾನ್ ಪ್ರೀಮಿಯರ್ ಲೀಗ್ (ಕೆಜಿಪಿಎಲ್) ಬ್ಯಾಡ್ಮಿಂಟನ್​ನಲ್ಲಿ 8ಪಿಎಂ ಕಿಂಗ್ಸ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಶನಿವಾರ ಪೈನಲ್​ನಲ್ಲಿ ಬಸವರಾಜ ಉಳ್ಳಾಗಡ್ಡಿಮಠ ಮಾಲೀಕತ್ವದ 8ಪಿಎಂ ಕಿಂಗ್ಸ್ ತಂಡ, ಡಾ. ಶೃತಿ ಮತ್ತು ಡಾ. ಅಪೂರ್ವ ಮಾಲೀಕತ್ವದ ವಿವ ವಿಕ್ಟರ್ಸ್ ತಂಡವನ್ನು 4-3 ಆಟಗಳ ಅಂತರದಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಉತ್ತಮ ಆಟಗಾರ ಪ್ರಶಸ್ತಿಯನ್ನು ಅಂಬಿಕಾ, ಪವನ ಕುಲಕರ್ಣಿ, ಡಾ. ಯೋಗಿ ದತ್ತ, ಡಾ. ರಾಘವೇಂದ್ರ ಭಟ್, ನಿತೇಶ ಪಟೇಲ, ಡಾ. ಸುಹಾಸ ಕಲಘಟಗಿ ಮತ್ತು ಯಶ್ ಜವಳಿ ಪಡೆದುಕೊಂಡರು.

ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಮಾತನಾಡಿ, ಇಂತಹ ಪಂದ್ಯಾವಳಿಗಳು ಮನಸ್ಸುಗಳನ್ನು ಒಗ್ಗೂಡಿಸಿ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ವಿುಸುತ್ತವೆ. ಇಂತಹ ಪಂದ್ಯಾವಳಿಗಳು ನಿಯಮಿತವಾಗಿ ನಡೆಯುವಂತಾಗಲಿ ಎಂದರು.

ಸತೀಶ(ಬಾಬು) ಶೆಟ್ಟಿ ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಕೆಜಿಎ ಕಾರ್ಯದರ್ಶಿ ವೀರಣ್ಣ ಸವಡಿ ಸ್ವಾಗತಿಸಿದರು. ಪಂದ್ಯಾವಳಿ ಸಂಯೋಜಕ ಉದಯ ಬಾಡಕರ ವಂದಿಸಿದರು. ವಿಮಲ ಗೋಟಡಿಕಿ ನಿರೂಪಿಸಿದರು.