ಕೊಕಟನೂರ: ಅಕ್ರಮವಾಗಿ ಶ್ರೀಗಂಧ ಕಟ್ಟಿಗೆ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬೆಳಗಾವಿ ಪೊಲೀಸ್ ಅರಣ್ಯ ಸಂಚಾರಿ ದಳದವರು ಸೋಮವಾರ ಅಥಣಿ ತಾಲೂಕಿನ ಹಣಮಾಪುರ ಕ್ರಾಸ್ ಬಳಿ ಬಂಧಿಸಿ, 89,643 ರೂ. ಮೌಲ್ಯದ ಶ್ರೀಗಂಧ ತುಂಡು ವಶಪಡಿಸಿಕೊಂಡಿದ್ದಾರೆ.
ಕಾಗವಾಡ ತಾಲೂಕಿನ ಐನಾಪುರದ ರಾಜು ವಿಠ್ಠಲ ಶಿಂಗೆ (42) ಬಂದಿತ. ಏ. 17 ಶನಿವಾರ ರಾತ್ರಿ ಮುರುಗುಂಡಿ ಕಡೆಯಿಂದ ಮದಬಾವಿ ಗ್ರಾಮದತ್ತ ಸಾಗುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಇನ್ನೋರ್ವ ವ್ಯಕ್ತಿ ಐನಾಪುರದ ಜ್ಞಾನಪ್ಪ ಉರ್ಫ್ ಪಿಂಟು ಮೇಖಳಿ ಪರಾರಿಯಾಗಿದ್ದಾನೆ. ರಾಜು ಶಿಂಗೆ ಬಳಿ ಇದ್ದ 30 ಕೆ.ಜಿ ಗಾಂಜಾವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ರೋಹಿಣಿ ಪಾಟೀಲ, ಸಿಬ್ಬಂದಿಗಳಾದ ಶಿವಾನಂದ ಅರಿಬೆಂಚಿ, ಕೆ.ಡಿ. ಹಿರೇಮಠ ಬಿ.ಬಿ. ಇಂಗಳಗಿ ಪಾಲ್ಗೊಂಡಿದ್ದರು.