ಹರಪನಹಳ್ಳಿ ಐ.ಬಿ.ವೃತ್ತದಿಂದ ಹರಿಹರ ವೃತ್ತದವರೆಗೆ ರಸ್ತೆ ವಿಭಜಕದಲ್ಲಿ ಹೈಟೆಕ್ ಬೀದಿ ದೀಪ ಅಳವಡಿಕೆ ಕಾಮಗಾರಿಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಭೂಮಿ ಪೂಜೆ ನೆರವೇರಿಸಿದರು. ಪುರಸಭಾ ಅಧ್ಯಕ್ಷೆ ಎಂ.ಪಾತೀಮಾಬಿ, ಉಪಾಧ್ಯಕ್ಷ ಎಚ್.ಕೊಟ್ರೇಶ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಇತರರಿದ್ದರು. 
ಜಿಲ್ಲೆ

88.30ಲಕ್ಷ ರೂ. ಅನುದಾನದಲ್ಲಿ ಬೀದಿ ದೀಪ ಅಳವಡಿಕೆ

ರುದ್ರಪ್ಪ ವಾಲಿ

ಹರಪನಹಳ್ಳಿ: ಪಟ್ಟಣದ ಐ.ಬಿ.ವೃತ್ತದಿಂದ ಹರಿಹರ ವೃತ್ತದವರೆಗೆ ರಸ್ತೆ ವಿಭಜಕದಲ್ಲಿ ಹೈಟೆಕ್ ಬೀದಿ ದೀಪ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಪುರಸಭೆ ಬಳಿ ಹೈಟೆಕ್ ಬೀದಿ ದೀಪ ಅಳವಡಿಕೆಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. 2024-25ನೇ ಸಾಲಿನಲ್ಲಿ 15ನೇ ಹಣಕಾಸು ಯೋಜನೆಯಲ್ಲಿ 88.30ಲಕ್ಷ ರೂ. ಅನುದಾನದಲ್ಲಿ ಬೀದಿ ದೀಪ ಹಾಗೂ ಕಂಬಗಳ ಅಳವಡಿಕೆ ಕ್ರಮವಹಿಸಲಾಗಿದೆ ಎಂದರು. ಪುರಸಭಾ ಸದಸ್ಯರಾದ ಮಂಜುನಾಥ ಇಜಂತಕರ್, ಲಾಟಿದಾದಾಪೀರ, ನಜೀರ, ನಾಮನಿರ್ದೇಶಿತ ಸದಸ್ಯರಾದ ಹೇಮಣ್ಣ ಮೋರಿಗೆರೆ, ಸುಮಾಜಗದೀಶ ಇತರರಿದ್ದರು.