ಜಿಲ್ಲೆ

ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಬಗ್ಗೆ ಕಸಾಪ ಅಧ್ಯಕ್ಷ ಮನು ಬಳಿಗಾರ್​ ಸ್ಪಷ್ಟನೆ

ಕಲಬುರಗಿ: ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಆಯ್ಕೆಯಲ್ಲಾದ ಗೊಂದಲಗಳ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಡಾ. ಮನು ಬಳಿಗರ್ ಶುಕ್ರವಾರ​ ಸ್ಪಷ್ಟನೆ ನೀಡಿದರು.

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಸಾಹಿತ್ಯ ಗೋಷ್ಠಿಯಲ್ಲಿ ಮಾತನಾಡಿ, ನಾ ಇಲ್ಲದಿರುವಾಗ ಸಮ್ಮೇಳನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ. ಅಲ್ಲದೆ ಅಧ್ಯಕ್ಷರ ಬದಲಾವಣೆ ಬಗ್ಗೆ ನಾನು ಒತ್ತಡ ಹೇರಿಲ್ಲ. ಇನ್ನು ಅಧ್ಯಕ್ಷರ ಆಯ್ಕೆಯಲ್ಲಿ ಗೊಂದಲವಿತ್ತು, ಗಲಾಟೆ ಆಗುತ್ತದೆ ಎಂಬ ಬಗ್ಗೆ ಮೊದಲೆ ತಿಳಿದಿತ್ತು. ಹೀಗಾಗಿ ಸಮ್ಮೇಳನ ಮುಂದೂಡುವಂತೆ ಹೇಳಿದ್ದು ನಿಜ, ಆದರೆ  ನನ್ನ ಮಾತು ಧಿಕ್ಕರಿಸಿ ಕಾರ್ಯಕ್ರಮ ನಡೆಸಲಾಯಿತು. ಹಾಗಂತ ಸಮ್ಮೇಳನ ನಡೆಸಲು ನಾನು ಅಡ್ಡ ಪಡಿಸಿಲ್ಲ ಸ್ಪಷ್ಟ ಪಡಿಸಿದರು.

ಕಸಾಪಕ್ಕೆ ಆರ್ಥಿಕ ವಿಷಚಯದಲ್ಲಿ ಯಾವುದೇ ಸಾರ್ವಭೌಮತ್ವ ಇಲ್ಲ. ದುಡ್ಡು ಬಿಡುಗಡೆ ಮಾಡುವುದು ಸರ್ಕಾರದ ಕೆಲಸ. ಕಾನೂನು ಅಡಿಯಲ್ಲಿ ಅನುದಾನ ಖರ್ಚು ಮಾಡಬೇಕಾಗುತ್ತದೆ ಎಂದು ಹೇಳಿದರು.