ಜಿಲ್ಲೆ

ಪಿಎಲ್‌ಡಿ ಬ್ಯಾಂಕ್‌ಗೆ ರೂ. 46 ಲಕ್ಷ ಲಾಭ

ಹೊನ್ನಾಳಿ: ಇಲ್ಲಿನ ಪಿಎಲ್‌ಡಿ ಬ್ಯಾಂಕ್‌ಗೆ 2022-23ನೇ ಸಾಲಿನಲ್ಲಿ 46.01ಲಕ್ಷ ರೂ. ನಿವ್ವಳ ಲಾಭ ಬಂದಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಮೇಶ್‌ಗೌಡ ತರಗನಹಳ್ಳಿ ತಿಳಿಸಿದರು.

ಪಿಎಲ್‌ಡಿ ಬ್ಯಾಂಕ್‌ನ ಆವರಣದಲ್ಲಿ ಗುರುವಾರ ಸರ್ವ ಸದಸ್ಯರ 85ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

2022-23ನೇ ಸಾಲಿನಲ್ಲಿ ಸಾಲ ವಸೂಲಾತಿಗೆ ಶೇ.80ರಷ್ಟು ಗುರಿ ಹೊಂದಿದ್ದೇವು. ಆದರೆ, ಶೇ. 71.42ರಷ್ಟು ಸಾಲ ವಸೂಲಾತಿ ಮಾಡಿದ್ದೇವೆ. ಬರಗಾಲ ಇದ್ದರೂ ರೈತರು ಸಾಲ ಮರುಪಾವತಿ ಮಾಡಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಹೆಚ್ಚು ಆರ್ಥಿಕ ಹಂಚಿಕೆ ಪಡೆದು, ಸ್ವಂತ ಬಂಡವಾಳ ಕ್ರೋಡೀಕರಿಸಿ ಉತ್ತಮ ವ್ಯವಹಾರಸ್ಥರಿಗೆ ಸಾಲ ನೀಡಿ ಲಾಭ ಗಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಉಪಾಧ್ಯಕ್ಷ ಗುತ್ಯಪ್ಪ, ನಿರ್ದೇಶಕರಾದ ನಾಗೇಂದ್ರಪ್ಪ, ಹನುಮಂತಪ್ಪ, ವಿಜಯಕುಮಾರ್, ತಿಮ್ಮೇಶಪ್ಪ, ಸರೋಜಾ ಸಿದ್ದಪ್ಪ, ಮಮತಾ ರಮೇಶ್, ಕೆ.ವಿ. ನಾಗರಾಜ್, ಬಸವರಾಜಪ್ಪ, ಎಲ್.ಕೆ. ಚಂದ್ರಪ್ಪ, ವ್ಯವಸ್ಥಾಪಕಿ ವಿಶಾಲಕ್ಷಿ ಇತರರು ಉಪಸ್ಥಿತರಿದ್ದರು.