ಕಂಪ್ಲಿ ಓದ್ಸೋ ಜಡೆಮ್ಮಗುರುಸಿದ್ಧಯ್ಯನವರ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆ -2ರ ಕೇಂದ್ರದಲ್ಲಿ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಲಾಯಿತು. ಮುಖ್ಯ ಅಧೀಕ್ಷಕಿ ಎಚ್.ಶಕುಂತಲಾ, ಶಿಕ್ಷಕರಾದ ಮಲ್ಲಯ್ಯ ಮಠ, ಕೆ.ರಾಮಚಂದ್ರರಾವ್, ಲೋಕೇಶ ಇತರರಿದ್ದರು. 
ಜಿಲ್ಲೆ

ಪರೀಕ್ಷೆಗೆ 85 ವಿದ್ಯಾರ್ಥಿಗಳು ಗೈರು

ರುದ್ರಪ್ಪ ವಾಲಿ

ಕಂಪ್ಲಿ: ಕಳೆದ ಮಾರ್ಚ್/ಏಪ್ರೀಲ್‌ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಇಲ್ಲಿನ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಆರಂಭಗೊಂಡಿದ್ದು, ಮೊದಲ ದಿನ ಪರೀಕ್ಷೆಗೆ 85ವಿದ್ಯಾರ್ಥಿಗಳು ಗೈರಾಗಿದ್ದರು.

ಓದ್ಸೋ ಜಡೆಮ್ಮ ಗುರುಸಿದ್ಧಯ್ಯನವರ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಪ್ರಥಮ ಭಾಷೆ ಕನ್ನಡಕ್ಕೆ 302ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಇವರಲ್ಲಿ 44ವಿದ್ಯಾರ್ಥಿಗಳು ಗೈರಾಗಿದ್ದರು. ಪ್ರಥಮ ಭಾಷೆ ಇಂಗ್ಲೀಷ್ ಪರೀಕ್ಷೆಗೆ ಎಲ್ಲ 8ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷಾ ಮುಖ್ಯ ಅಧೀಕ್ಷಕಿ ಎಚ್.ಶಕುಂತಲಾ, ಕಸ್ಟೋಡಿಯನ್ ಕೆ.ರಾಮಚಂದ್ರರಾವ್, ಸ್ಥಾನಿಕ ಜಾಗೃತ ದಳ ಅಧಿಕಾರಿಯಾಗಿ ಚಿದಾನಂದ ಗವಾಯಿ ಕಾರ್ಯನಿರ್ವಹಿಸಿದರು.

ಕಮ್ಮವಾರಿ ವಿಜಯನಗರ ಆಂಗ್ಲಮಾಧ್ಯಮ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಪ್ರಥಮ ಭಾಷೆ ಕನ್ನಡಕ್ಕೆ 281ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಇವರಲ್ಲಿ 41ವಿದ್ಯಾರ್ಥಿಗಳು ಗೈರಾಗಿದ್ದರು. ಪ್ರಥಮ ಭಾಷೆ ಇಂಗ್ಲೀಷ್ ಪರೀಕ್ಷೆಗೆ ಎಲ್ಲ 10ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷಾ ಮುಖ್ಯ ಅಧೀಕ್ಷಕಿ ಗಾಯತ್ರಿದೇವಿ ಬಿ.ಎಂ., ಕಸ್ಟೋಡಿಯನ್ ಮುದ್ದಕಪ್ಪ ನೆಲಜೇರಿ, ಸ್ಥಾನಿಕ ಜಾಗೃತ ದಳ ಅಧಿಕಾರಿಯಾಗಿ ಸಾವಿತ್ರಿ ಕಾರ್ಯನಿರ್ವಹಿಸಿದರು.

ತಾಲೂಕಿನಲ್ಲಿ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟಾರೆ 887ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪಾರದರ್ಶಕ ಪರೀಕ್ಷೆಗೆ ಸೂಕ್ತ ಕ್ರಮ ಕೈಗೊಂಡಿದೆ ಎಂದು ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿ ಶಿವಣ್ಣ ತಿಳಿಸಿದ್ದಾರೆ.