ನೇತ್ರದಾನ ಸಂಕಲ್ಪ ಮಾಡಿರುವ ಕೇರೂರು ಗ್ರಾಮದ ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು. 
ಜಿಲ್ಲೆ

83 ವಿದ್ಯಾರ್ಥಿಗಳಿಂದ ನೇತ್ರದಾನಕ್ಕೆ ವಾಗ್ದಾನ

Belagavi

ಮಾಂಜರಿ: ರಾಜರತ್ನ ಪುನೀತ್ ರಾಜಕುಮಾರ ನೇತ್ರದಾನ ಮಾಡಿ ಕೋಟ್ಯಂತರ ಅಭಿಮಾನಿಗಳಿಗೆ ಪ್ರೇರಣೆಯಾಗಿದ್ದರು. ಅವರ ಮೇಲಿನ ಅಭಿಮಾನಕ್ಕಾಗಿ ಒಂದೇ ಕಾಲೇಜಿನ 85 ವಿದ್ಯಾರ್ಥಿಗಳು ಹಾಗೂ 20 ಪಾಲಕರು ನೇತ್ರದಾನ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ಸಮೀಪದ ಕೇರೂರು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ 83 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರೇರಣೆಯಿಂದ ನೇತ್ರದಾನ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಈ ಕುರಿತು ಪತ್ರ ಬರೆದಿದ್ದು, ನೇತ್ರದಾನ ಮಾಡಿದ ಎಲ್ಲರಿಗೂ ಆಸ್ಪತ್ರೆ ಪ್ರಮಾಣ ಪತ್ರ ನೀಡಿದೆ.