ಜಿಲ್ಲೆ

83 ಸಾವಿರ ರೂ. ನಗದು ಜಪ್ತಿ

ಮರಿದೇವ ಹೂಗಾರ

ಹುಬ್ಬಳ್ಳಿ: ದೀಪಾವಳಿ ಹಬ್ಬದ ನಿಮಿತ್ತ ತಾಲೂಕಿನ ಕಸುಗುಲ್, ಅಂಚಟಗೇರಿ, ಚನ್ನಾಪುರ, ಚೌರಗುಡ್ಡದಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದವರ ಮೇಲೆ ಹುಬ್ಬಳ್ಳಿ ಗ್ರಾಮಿಣ ಠಾಣೆ ಪೊಲೀಸರು ಶನಿವಾರ ದಾಳಿ ಮಾಡಿ, 31 ಜನರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 83 ಸಾವಿರ ರೂ. ನಗದು, ಇಸ್ಪೀಟ್ ಎಲೆ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ತಿಳಿಸಿದ್ದಾರೆ.