ಜಿಲ್ಲೆ

೨೪ ಗಂಟೆಯಲ್ಲಿ ೮೩.೮೦ ಮಿ.ಮೀ ಮಳೆ


ಮಡಿಕೇರಿ: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೮೩.೮೦ ಮಿ.ಮೀ.ಮಳೆಯಾಗಿದೆ.


ಕಳೆದ ವರ್ಷ ಇದೇ ದಿನ ೫೭.೦೬ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ ೫೩೫.೨೪ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೧೦೮೧.೯೦ ಮಿ.ಮೀ ಮಳೆಯಾಗಿತ್ತು.


ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೧೪೦.೫೦ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೫೯.೪೦ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೫೧.೫೦ ಮಿ.ಮೀ. ಮಳೆಯಾಗಿದೆ.

ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೧೦೮.೨೦, ನಾಪೋಕ್ಲು ೭೬.೨೦, ಸಂಪಾಜೆ ೧೫೦, ಭಾಗಮಂಡಲ ೨೨೭.೬೦, ವಿರಾಜಪೇಟೆ ಕಸಬಾ ೧೧೮.೪೦, ಹುದಿಕೇರಿ ೪೭, ಶ್ರೀಮಂಗಲ ೬೫, ಪೊನ್ನಂಪೇಟೆ ೫೫, ಅಮ್ಮತಿ ೬೧, ಬಾಳೆಲೆ ೧೦, ಸೋಮವಾರಪೇಟೆ ಕಸಬಾ ೪೨.೪೦, ಶನಿವಾರಸಂತೆ ೩೭.೨೦, ಶಾಂತಳ್ಳಿ ೧೦೬, ಕೊಡ್ಲಿಪೇಟೆ ೩೬.೨೦, ಕುಶಾಲನಗರ ೩೨.೨೦, ಸುಂಟಿಕೊಪ್ಪ ೫೫ ಮಿ.ಮೀ.ಮಳೆಯಾಗಿದೆ.