ಬೆಳಗಾವಿ: ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಜೈನ ಇಂಟರ್ನ್ಯಾಷನಲ್ ಟ್ರೆಡ್ ಆರ್ಗನೈಜೇಶನ್(ಜಿತೋ) ಸಂಸ್ಥೆ ಹಾಗೂ ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ 801 ಜನರು ರಕ್ತದಾನ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಇಲ್ಲಿನ ಮಹಾವೀರ ಭವನದಲ್ಲಿ ರಕ್ತದಾನ ಶಿಬಿರದಲ್ಲಿ ಸೋಮವಾರ ಆಯೋಜಿಸಲಾಗಿತ್ತು. ರಕ್ತದಾನ ಮಾಡಿದ ದಾನಿಗಳಿಗೆ ದಿ.ನ್ಯೂ ಇಂಡಿಯಾ ಎಶ್ಯುರೆನ್ಸ್ ಕಂಪನಿ ವತಿಯಿಂದ ಜನತಾ ವೈಯಕ್ತಿಕ ಅಪಘಾತ ಪಾಲಿಸಿ ಯೋಜನೆಯಡಿ ಒಂದು ವರ್ಷದ ಅವಧಿಗೆ 1 ಲಕ್ಷ ರೂ.ಮೊತ್ತದ ವಿಮೆ ಯೋಜನೆ ಅನುಷ್ಠಾನಗೊಳಿಸಲಾಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂದ ಉತ್ತರ ಕರ್ನಾಟಕ ಪ್ರಾಂತ ಕಾರ್ಯವಾಹಕ ರಾವೇಂದ್ರ ಕಾಗವಾಡ ರಕ್ತದಾನ ಶಿಬಿರ ಉದ್ಘಾಟಿಸಿದರು. ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಚನ್ನಬಸಪ್ಪ ಆ್ಯಂಡ್ ಸನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೃಣಾಲ್ ಬಿ.ಎಸ್, ಕಾರ್ಯಕ್ರಮ ಯೋಜನಾಧಿಕಾರಿ ಹರ್ಷವರ್ಧನ ಇಂಚಲ, ದಿ ನ್ಯೂ ಇಂಡಿಯಾ ಎಶ್ಯುರನ್ಸ್ ಕಂಪನಿ ವಿಭಾಗೀಯ ವ್ಯವಸ್ಥಾಪಕ ಬಿ.ಎಸ್.ಸುರೇಶಕುಮಾರ, ಬೆಳಗಾವಿಯ ಉಪ ಔಷಧ ನಿಯಂತ್ರಕ ಕೆ.ಮಲ್ಲಿಕಾರ್ಜುನ, ಮತ್ತು ಅಜಯ ಮುದಗಲ್ಲ ಇತರರಿದ್ದರು.
ಜಿತೋ ಅಧ್ಯಕ್ಷ ಪುಷ್ಪಕ ಹನಮಣ್ಣವರ ಸ್ವಾಗತಿಸಿದರು. ಅಭಯ ಆದಿಮನಿ ಪ್ರಾಸ್ತಾವಿಕ ಮಾತನಾಡಿದರು. ಜಿತೋ ಕಾರ್ಯದರ್ಶಿ ಅಮಿತ ದೋಷಿ ವಂದಿಸಿದರು.